ನವದೆಹಲಿ: ಕೆಂಪು ಸಮುದ್ರದಲ್ಲಿ ಇರಾಕ್ ಬೆಂಬಲಿತ ಹೌತಿ ಉಗ್ರರ ಗುಂಪು 22 ಭಾರತೀಯರು ಇದ್ದ ಮರ್ಲಿನ್ ಲುವಾಂಡ ಎಂಬ ಬ್ರಿಟನ್ ಟ್ಯಾಂಕರ್ ಮೇಲೆ ದಾಳಿ ನಡೆಸಿದೆ.
ಉಗ್ರರ ದಾಳಿಯಿಂದಾಗಿ ತೈಲ ಸಾಗಿಸುತ್ತಿದ್ದ ಬೃಹತ್ ಹಡಗು ಹೊತ್ತಿ ಉರಿದಿದ್ದು, ರಕ್ಷಣೆಗೆ ಭಾರತೀಯ ನೌಕಾಪಡೆಯ ಐಎನ್ಎಸ್ ವಿಶಾಕಪಟ್ಟಣಂ ಧಾವಿಸಿದೆ. ಜನವರಿ 26ರಂದು ಹೌತಿ ಉಗ್ರರು ಬ್ರಿಟನ್ ತೈಲ ಟ್ಯಾಂಕರ್ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಭಾರತೀಯ ನೌಕಾಪಡೆ ಮಾಹಿತಿ ನೀಡಿದೆ. ಭಾರತೀಯರ ರಕ್ಷಣೆಗಾಗಿ ನೌಕಾಪಡೆಯ ಕ್ಷಿಪಣಿ ನಿರೋಧಕ ಐಎನ್ಎಸ್ ವಿಶಾಖಪಟ್ಟಣಂ ನೌಕೆಯನ್ನು ನಿಯೋಜಿಸಲಾಗಿದ್ದು, ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ.
ಜನವರಿ 26 ರ ರಾತ್ರಿ MV ಮರ್ಲಿನ್ ಲುವಾಂಡಾ ಅವರ ಸಂಕಷ್ಟದ ಕರೆಗೆ ಪ್ರತಿಕ್ರಿಯೆಯಾಗಿ ಭಾರತೀಯ ನೌಕಾಪಡೆಯು ತನ್ನ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕ INS ವಿಶಾಖಪಟ್ಟಣಂ ಅನ್ನು ಏಡೆನ್ ಕೊಲ್ಲಿಯಲ್ಲಿ ನಿಯೋಜಿಸಿದೆ ಎಂದು ಹೇಳಿದೆ.
ಬ್ರಿಟಿಷ್ ತೈಲ ಟ್ಯಾಂಕರ್ ಮಾರ್ಲಿನ್ ಲುವಾಂಡಾದಲ್ಲಿ 22 ಭಾರತೀಯರು ಮತ್ತು ಒಬ್ಬ ಬಾಂಗ್ಲಾದೇಶದ ಸಿಬ್ಬಂದಿ ಇದ್ದಾರೆ. ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನಲ್ಲಿ ಅಗ್ನಿಶಾಮಕ ಪ್ರಯತ್ನಗಳನ್ನು ಎನ್‌ಬಿಸಿಡಿ ತಂಡ ಕೈಗೊಂಡಿದೆ. ಭಾರತೀಯ ನೌಕಾಪಡೆಯು ವ್ಯಾಪಾರಿ ಹಡಗುಗಳನ್ನು ರಕ್ಷಿಸಲು ಮತ್ತು ಸಮುದ್ರದಲ್ಲಿ ಸುರಕ್ಷತೆ ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಹೇಳಲಾಗಿದೆ.
ಯೆಮೆನ್‌ನ ಹೌತಿ ಬಂಡುಕೋರರು ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ. ದಿ ಗಾರ್ಡಿಯನ್ ಪ್ರಕಾರ, ತಮ್ಮ ನೌಕಾ ಪಡೆಗಳು ಏಡನ್ ಕೊಲ್ಲಿಯಲ್ಲಿ ಬ್ರಿಟಿಷ್ ತೈಲ ಟ್ಯಾಂಕರ್ ಮಾರ್ಲಿನ್ ಲುವಾಂಡಾ ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಿದೆ. ಸೂಕ್ತ ನೌಕಾ ಕ್ಷಿಪಣಿಗಳನ್ನು ಬಳಸಲಾಗಿದೆ. ನೇರ ದಾಳಿ ನಡೆಸಲಾಗಿದೆ ಎಂದು ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸರಿಯಾ ತಿಳಿಸಿದ್ದಾರೆ.
ಜನವರಿ 26 ರಂದು, ಸರಿಸುಮಾರು 7:45 pm(ಸನಾ ಸಮಯ)ಗೆ ಇರಾನ್ ಬೆಂಬಲಿತ ಹೌತಿ ಭಯೋತ್ಪಾದಕರು ಯೆಮೆನ್‌ನ ಹೌತಿ-ನಿಯಂತ್ರಿತ ಪ್ರದೇಶಗಳಿಂದ ಒಂದು ಹಡಗು ವಿರೋಧಿ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹಾರಿಸಿದರು. ಮಾರ್ಷಲ್ ದ್ವೀಪಗಳ ಧ್ವಜದ ತೈಲ ಟ್ಯಾಂಕರ್ M/V ಮಾರ್ಲಿನ್ ಲುವಾಂಡಾವನ್ನು ಹೊಡೆದಿದ್ದಾರೆ ಎಂದು US ಸೆಂಟ್ರಲ್ ಕಮಾಂಡ್(CENTCOM) X ನಲ್ಲಿ ಬರೆದಿದೆ.
ಸಂಕಷ್ಟದ ಕರೆ ಬಂದ ಕೂಡಲೇ USS ಕಾರ್ನಿ(DDG 64) ಮತ್ತು ಇತರ ಒಕ್ಕೂಟದ ಹಡಗುಗಳು ಪ್ರತಿಕ್ರಿಯಿಸಿ ಸಹಾಯ ನೀಡುತ್ತಿವೆ ಎಂದು ತಿಳಿಸಲಾಗಿದೆ.