ಮನೆ-ನಿವೇಶನ ಖರೀದಿಸುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ರೇರಾ ಕಾಯ್ದೆ ಅಡಿ ನೋಂದಣಿಯಾಗಿದ್ದರೆ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಅಸಾಧ್ಯವೆಂದು ಹೇಳಲಾಗಿದೆ.
ಲೇಔಟ್ ಗಳಲ್ಲಿ ನಿವೇಶನ, ಅಪಾರ್ಟ್ ಮೆಂಟ್ ಗಳಲ್ಲಿ ಮನೆ ಖರೀದಿಸುವ ಮೊದಲು ಡೆವಲಪರ್ಸ್ ಮತ್ತು ಬಿಲ್ಡರ್ ಗಳು ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆಯಡಿ ಸಂಬಂಧಿತ ವಸತಿ ಯೋಜನೆಯ ಬಗ್ಗೆ ನೋಂದಣಿ ಮಾಡಿಸಿಕೊಂಡಿರುವ ಬಗ್ಗೆ ಖರೀದಿದಾರರು ಪರಿಶೀಲಿಸಬೇಕಿದೆ. ಒಂದು ವೇಳೆ ರೇರಾ ಕಾಯ್ದೆ ನೊಂದಣಿಯಾಗದ ನಿವೇಶನ ಮತ್ತು ಅಪಾರ್ಟ್ಮೆಂಟ್ ಮನೆಗಳನ್ನು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.
ಅಂದ ಹಾಗೆ, 2017 ರಿಂದಲೂ ರಾಜ್ಯದಲ್ಲಿ ರೇರಾ ಕಾಯ್ದೆ ಜಾರಿಯಲ್ಲಿದೆ. ವಸತಿ ಯೋಜನೆಗಳಲ್ಲಿ ಮತ್ತು 8 ಕ್ಕಿಂತ ಹೆಚ್ಚುವರಿ ಘಟಕದ ಅಪಾರ್ಟ್ಮೆಂಟ್, 5 ಸಾವಿರ ಚದರ ಮೀಟರ್ ಗಿಂತ ಹೆಚ್ಚಿನ ವಿಸ್ತೀರ್ಣದ ಪ್ರದೇಶದಲ್ಲಿ ನಿವೇಶನಗಳನ್ನು ರಚಿಸಿ ಮಾರಾಟ ಮಾಡುವವರು ರೇರಾ ಕಾಯ್ದೆಯ ಪ್ರಕಾರ ಸಂಬಂಧಿತ ಯೋಜನೆಯ ಬಗ್ಗೆ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡಿಸಿಕೊಳ್ಳದಿದ್ದರೆ ರಿಜಿಸ್ಟ್ರೇಷನ್ ಆಗುವುದಿಲ್ಲ. ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.