ಬಳ್ಳಾರಿಯಲ್ಲಿ ಮನೆ ಕುಸಿದುಬಿದ್ದು ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೌಲ್ ಬಜಾರ್ ಪ್ರದೇಶದ ಆದೋನಿ ಸ್ಟ್ರೀಟ್ ನಲ್ಲಿ ಘಟನೆ ನಡೆದಿದೆ.
ಕೋಲಣ್ಣ(45) ಸಾವಿತ್ರಿ(40) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಣ್ಣಿನಡಿ ಸಿಲುಕಿದ 13 ವರ್ಷದ ಬಾಲಕ ಸಂತೋಷ್ ನನ್ನು ರಕ್ಷಿಸಲಾಗಿದೆ. 2 ದಿನಗಳಿಂದ ಚಂಡಮಾರುತದ ಪರಿಣಾಮ ಜಿಟಿ ಜಿಟಿ ಮಳೆಯಾಗುತ್ತಿದ್ದು, ತೇವವಾಗಿದ್ದ ಮಣ್ಣಿನ ಮನೆ ಕುಸಿದು ದಂಪತಿ ಸಾವನ್ನಪ್ಪಿದ್ದಾರೆ. ಕೌಲ್ ಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.