
ಬೆಂಗಳೂರು: ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಗೃಹಗಳ ಬೆಲೆಯನ್ನು ಒಂದು ಲಕ್ಷ ರೂಪಾಯಿ ಇಳಿಕೆ ಮಾಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿಗಳ ಒಂದು ಲಕ್ಷ ಬಹು ಮಹಡಿ ವಸತಿಗೃಹಗಳ ಬೆಲೆ ಒಂದು ಲಕ್ಷ ಇಳಿಕೆ ಮಾಡಲಾಗಿದೆ. ಮನೆ ಫ್ಲಾಟ್ ಗಳ ಬೆಲೆಯನ್ನು 15 ಲಕ್ಷ ರೂ.ನಿಂದ 14 ಲಕ್ಷ ರೂ.ಗೆ ಇಳಿಕೆ ಮಾಡಲಾಗಿದೆ.
ಈಗಾಗಲೇ 8000 ಮನೆ ನಿರ್ಮಿಸಲಾಗಿದ್ದು, 6000 ಮನೆಗಳಿಗೆ ಹಣ ಪಾವತಿಯಾಗಿದೆ. ಒಟ್ಟು 46,499 ಮನೆಗಳನ್ನು ನಿರ್ಮಿಸಿ ಹಸ್ತಾಂತರ ಮಾಡಲಾಗುತ್ತದೆ ಎಂದು ಸಂಪುಟ ಸಭೆಯ ಬಳಿಕ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.