alex Certify BIG NEWS: ಲೀಸ್, ಬಾಡಿಗೆ ಉದ್ದೇಶದಿಂದ ಮನೆ ಖರೀದಿಸಿದರೆ ಗ್ರಾಹಕರಾಗಲ್ಲ: ಗ್ರಾಹಕ ಆಯೋಗ ಮಹತ್ವದ ತೀರ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲೀಸ್, ಬಾಡಿಗೆ ಉದ್ದೇಶದಿಂದ ಮನೆ ಖರೀದಿಸಿದರೆ ಗ್ರಾಹಕರಾಗಲ್ಲ: ಗ್ರಾಹಕ ಆಯೋಗ ಮಹತ್ವದ ತೀರ್ಪು

ಬಾಡಿಗೆ, ಲೀಸ್ ಗೆ ನೀಡುವ ಉದ್ದೇಶದಿಂದ ಮನೆ ಖರೀದಿಸಿದರೆ ಗ್ರಾಹಕರಾಗುವುದಿಲ್ಲ. ಅದು ಲಾಭದಾಯಕ ಹೂಡಿಕೆಯ ವಾಣಿಜ್ಯ ವಹಿವಾಟು ಅಷ್ಟೇ. ಅದರಲ್ಲಿ ಗ್ರಾಹಕರ ಪ್ರಶ್ನೆ ಇಲ್ಲ ಎಂದು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ತೀರ್ಪು ನೀಡಿದೆ.

ಈ ಮೂಲಕ ಫ್ಲಾಟ್ ಮಾಲೀಕರಿಗೆ ಶಾಕ್ ನೀಡಿದೆ. ಬಾಡಿಗೆ ಆದಾಯದ ಮೂಲಕ ವಾಣಿಜ್ಯ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಫ್ಲಾಟ್ ಗಳನ್ನು ಖರೀದಿಸಿದರೆ ಅವರು ಗ್ರಾಹಕರಾಗುವುದಿಲ್ಲ. ಅಂತವರು ಗ್ರಾಹಕ ಹಿತರಕ್ಷಣಾ ಕಾಯಿದೆ ಅನ್ವಯ ತಮ್ಮ ಹಕ್ಕು ಮಂಡಿಸಲು ಆಗುವುದಿಲ್ಲ ಎಂದು ಆಯೋಗ ಮಹತ್ವದ ತೀರ್ಪು ನೀಡಿದೆ.

ಪ್ರತಿ ತಿಂಗಳು ಹೆಚ್ಚಿನ ಆದಾಯ ಗಳಿಸುವ ಉದ್ದೇಶದಿಂದ, ಹೂಡಿಕೆಯ ದೃಷ್ಟಿಯಿಂದ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ ಫ್ಲಾಟ್ ಖರೀದಿಸಿ ಬಾಡಿಗೆ ಬಿಟ್ಟಿರುವವರಿಗೆ ಈ ತೀರ್ಪು ಆಘಾತವನ್ನುಂಟು ಮಾಡಿದೆ.

ಪ್ರಕರಣದಲ್ಲಿ ವಿವಾದ ಇರುವುದು ವಾಣಿಜ್ಯ ಫ್ಲಾಟ್ ಗಳ ನಿರ್ಮಾಣದಲ್ಲಿನ ನ್ಯೂನ್ಯತೆಗೆ ಸಂಬಂಧಿಸಿದ್ದಾಗಿದೆ. ಗ್ರಾಹಕರ ಹಿತರಕ್ಷಣಾ ಕಾಯ್ದೆ ಅನ್ವಯ ಯಾವುದೇ ಸರಕುಗಳಿಗೆ ಸಂಬಂಧಿಸಿದ್ದಲ್ಲ. ಸೇವೆಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಡುತ್ತಿರುವ ಪ್ರಕರಣ ಇದಾಗಿದೆ. ವಾಣಿಜ್ಯ ಉದ್ದೇಶಗಳಿಗೆ ಸೇವೆ ಪಡೆಯಲಾಗಿದೆಯೇ ಇಲ್ಲವೇ ಎಂಬುದು ಕೂಡ ಮುಖ್ಯವಾಗುತ್ತದೆ. ಲಾಭ ಗಳಿಸುವ ಉದ್ದೇಶದಿಂದ ಹೂಡಿಕೆ ಮಾಡಿದ್ದರೆ ಅದು ವಾಣಿಜ್ಯ ವಹಿವಾಟು ಆಗುತ್ತದೆ. ಈ ಪ್ರಕರಣದಲ್ಲಿ ಕಮರ್ಷಿಯಲ್ ಪ್ರಾಪರ್ಟಿ ಪಡೆದು ಅದನ್ನು ಲೀಸ್ ಅಥವಾ ಬಾಡಿಗೆಗೆ ಬಿಟ್ಟು ಆದಾಯ ಗಳಿಸುವುದಾಗಿದೆ. ಇದರ ಉದ್ದೇಶ ಲಾಭ ಮಾಡುವುದೇ ಆಗಿದೆ ಎಂದು ಆಯೋಗ ಹೇಳಿದೆ.

ಗುರುಗ್ರಾಮದ ವರುಣ್ ಅಹುಜಾ ಅವರು ವಸತಿ ಯೋಜನೆಯೊಂದರಲ್ಲಿ ಫ್ಲಾಟ್ ಗಳನ್ನು ಖರೀದಿಸಿದ್ದರು. ರೆಸ್ಟೋರೆಂಟ್, ಡಿಟೇಲ್ ಯೂನಿಟ್, ಇತರೆ ಮೂಲಸೌಕರ್ಯ ಒದಗಿಸುವುದಾಗಿ ಅವರಿಗೆ ಭರವಸೆ ನೀಡಲಾಗಿತ್ತು. ನಂತರ ವಾಹನಗಳ ಪಾರ್ಕಿಂಗ್ ಗೆ ಮೀಸಲಿಟ್ಟ ಜಾಗದಲ್ಲಿ ಹೊಸ ಬ್ಲಾಕ್ ನಿರ್ಮಿಸುವುದಾಗಿ ಬಿಲ್ಡರ್ ಹೇಳಿದ್ದು, ಇದಕ್ಕೆ ಒಪ್ಪದ ದೂರುದಾರ ಅಹುಜಾ ತಮಗೆ ಬರುವ ಬಾಡಿಗೆ ಹಣ ಕಡಿಮೆಯಾಗುತ್ತದೆ ಎಂದು ಆಕ್ಷೇಪಿಸಿ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...