
ಮಂಡ್ಯ: ಕೊಂಡೋತ್ಸವ ವೀಕ್ಷಣೆ ವೇಳೆ ಸಜ್ಜ ಕುಸಿದು ಮಹಿಳೆ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಹುಲಗೆರೆಪುರದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹುಲಗೆರೆಪುರದಲ್ಲಿ ಬಸವೇಶ್ವರ ದೇವರ ಕೊಂಡೋತ್ಸವದ ವೇಳೆಯಲ್ಲಿ ಘಟನೆ ನಡೆದಿದೆ. ಸಾಕಷ್ಟು ಜನರು ಕೊಂಡೋತ್ಸವ ವೀಕ್ಷಿಸಲು ಮನೆ ಸಜ್ಜ ಮೇಲಿದ್ದ ವೇಳೆ ಏಕಾಏಕಿ ಸಜ್ಜ ಕುಸಿದು ಪುಟ್ಟಲಿಂಗಮ್ಮ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಜ್ಜ ಬಿದ್ದ ಕೂಡಲೇ ಸ್ಥಳೀಯರು ಧಾವಿಸಿ ಆಂಬುಲೆನ್ಸ್, ಇತರೆ ವಾಹನಗಳಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.