ಬೆಂಗಳೂರು: ಸಿನಿಮಾ ಥಿಯೇಟರ್ ಗಳಲ್ಲಿ ಕಾಣಿಸುತ್ತಿದ್ದ ಹೌಸ್ ಫುಲ್ ಬೋರ್ಡ್ ಈಗ ಸ್ಮಶಾನದಲ್ಲಿ ಕಾಣಿಸುತ್ತಿವೆ. ಕೊರೋನಾ ಸೋಂಕಿನಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅಂತ್ಯಕ್ರಿಯೆ ನೆರವೇರಿಸಲು ಮೃತದೇಹಗಳನ್ನು ಸರತಿ ಸಾಲಿನಲ್ಲಿ ಇಟ್ಟುಕೊಂಡು ಕಾಯುವ ಪರಿಸ್ಥಿತಿ ಬಂದಿದೆ.
ಸ್ಮಶಾನಗಳಲ್ಲಿ ನಿರಂತರವಾಗಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದರೂ ಮೃತದೇಹಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಹೀಗಾಗಿ ಬೆಂಗಳೂರು ನಗರದ ಚಾಮರಾಜಪೇಟೆ ಹಿಂದೂ ರುದ್ರಭೂಮಿ ಗೇಟ್ ಮುಂದೆ ‘ಹೌಸ್ ಫುಲ್’ ಫಲಕ ನೇತು ಹಾಕಲಾಗಿದೆ.
ಅಂತ್ಯಕ್ರಿಯೆಗಾಗಿ ಬಂದ ಹೆಣಗಳ ರಾಶಿಯೇ ಇದ್ದು ದಹನ ಮಾಡಲು ಸಮಯ ಬೇಕಾಗುತ್ತದೆ. ಹೀಗಾಗಿ ಹೌಸ್ ಫುಲ್ ಬೋರ್ಡ್ ನೇತು ಹಾಕಲಾಗಿದೆ. ಮೃತದೇಹ ಅಂತ್ಯಸಂಸ್ಕಾರ ನೆರವೇರಿಸಲು ಬಂದವರು ಅನಿವಾರ್ಯವಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಅಂತ್ಯಕ್ರಿಯೆ ನೆರವೇರಿಸಲು ಸ್ಥಳಾವಕಾಶದ ಕೊರತೆ ಕಾರಣಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ.