ಹಾವೇರಿ: ಹಾವೇರಿ ಜಿಲ್ಲೆ ಬ್ಯಾಡಗಿಯ ಬಸವೇಶ್ವರನಗರದಲ್ಲಿ 30 ಕೋಟಿ ರೂಪಾಯಿ ಮೌಲ್ಯದ ಮನೆಗೆ ಬೆಂಕಿ ತಗುಲಿ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.
ಮೆಣಸಿನಕಾಯಿ ವರ್ತಕ ವಿವೇಕಾನಂದ ಬೆಟಗೇರಿ ಕುಟುಂಬದವರಿಗೆ ಸೇರಿದ ಮನೆಯಲ್ಲಿ ಗುರುವಾರ ಬೆಳಿಗ್ಗೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಸುಮಾರು 7 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ ಎನ್ನಲಾಗಿದೆ.
ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ಆರು ವರ್ಷಗಳ ಹಿಂದೆ 8500 ಚದರ ಅಡಿಯಲ್ಲಿ ಮನೆ ನಿರ್ಮಾಣ ಮಾಡಲಾಗಿತ್ತು. ಬ್ಯಾಡಗಿ ಪಟ್ಟಣದಲ್ಲಿಯೇ ಅತ್ಯಂತ ಐಷಾರಾಮಿ ಕಟ್ಟಡ ಇದಾಗಿದೆ. ಮನೆಯಲ್ಲಿದ್ದ 10 ಬೆಡ್ರೂಮ್ ಗಳ ಪೈಕಿ 5 ಬೆಡ್ರೂಮ್ ಸೇರಿ ಲೈಬ್ರರಿ, ಹೋಂ ಥಿಯೇಟರ್, ಬೆಲೆ ಬಾಳುವ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಹಾವೇರಿ, ರಾಣೇಬೆನ್ನೂರು, ಬ್ಯಾಡಗಿಯಿಂದ ಬಂದಿದ್ದ ಮೂರು ಅಗ್ನಿಶಾಮಕ ವಾಹನಗಳು, ಸಿಬ್ಬಂದಿ ನಾಲ್ಕು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.