ನವದೆಹಲಿ: ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಇಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಿದ ಅರ್ಧ ಗಂಟೆಗೇ ಒಂದು ಇಲೆಕ್ಟ್ರಿಕ್ ಬಸ್ ಕೆಟ್ಟು ನಿಂತು ದೇಶದ ಗಮನಸೆಳೆದಿದೆ.
ರೋಹಿಣಿ ಡಿಪೋ ಬಳಿ ಈ ಘಟನೆ ಆಗಿದೆ. ಬಸ್‌ನ ಇಂಜಿನ್ ತಾಪ ಹೆಚ್ಚಾದ ಕಾರಣ ಹೀಗಾಗಿದೆ ಎಂದು ದೆಹಲಿ ಸಾರಿಗೆ ಸಂಸ್ಥೆ ಸಮಜಾಯಿಷಿ ನೀಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಇಂದ್ರಪ್ರಸ್ಥ ಡಿಪೋದಿಂದ 150 ಹೊಸ ಎಲೆಕ್ಟ್ರಿಕ್ ಬಸ್‌ಗಳಿಗೆ ಚಾಲನೆ ನೀಡಿದರು. ಸಿಎಂ ಕೇಜ್ರಿವಾಲ್ ಮತ್ತು ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಇಂದ್ರಪ್ರಸ್ಥ ಡಿಪೋದಿಂದ ರಾಜ್‌ಘಾಟ್ ಡಿಪೋಗೆ ಇಲೆಕ್ಟ್ರಿಕ್ ಬಸ್‌ನಲ್ಲಿ ಸ್ವಲ್ಪ ಪ್ರಯಾಣಿಸಿದರು.
ಈ ಬಸ್‌ಗಳ ಪೈಕಿ ಒಂದು ರೋಹಿಣಿ ಡಿಪೋ ಬಳಿ ಕೆಟ್ಟು ಹೋಯಿತು. ವಾಹನದ ನಿಗದಿತ ತಾಪ ಮಿತಿ ಮೀರಿದ ತಾಪ ಇದ್ದ ಕಾರಣ ಹೀಗಾಗಿದೆ. ಮೆಕಾನಿಕ್‌ಗಳ ತಂಡ ಕೂಡಲೇ ಅದನ್ನು ಸರಿಪಡಿಸಿದ್ದು, ಎರಡು ಗಂಟೆ ಒಳಗೆ ಆ ಬಸ್ ಮತ್ತೆ ಸಂಚಾರ ಆರಂಭಿಸಿದೆ ಎಂದು ಡಿಟಿಸಿ ಹೇಳಿದೆ.
ನಿರ್ದಿಷ್ಟಪಡಿಸಿದ/ವಿನ್ಯಾಸಗೊಳಿಸಿದ ಮಿತಿಯನ್ನು ಮೀರಿ ಮತ್ತು ಆದ್ದರಿಂದ ವಾಹನವು ಅದರ ಅಂತರ್ಗತ ಸುರಕ್ಷತಾ ವೈಶಿಷ್ಟ್ಯದ ಕಾರಣ ಸ್ವಯಂಚಾಲಿತವಾಗಿ ನಿಲ್ಲಿಸಿತು. ರೆಸ್ಪಾನ್ಸ್ ಟೀಮ್ ತಕ್ಷಣವೇ ಸ್ಥಳಕ್ಕೆ ತಲುಪಿತು. ಬಸ್ ದುರಸ್ತಿ ಕಾರ್ಯ ಕೈಗೊಂಡು ಎರಡು ಗಂಟೆಗಳ ಒಳಗೆ ಅದು ಮತ್ತೆ ಸಂಚಾರ ಮುಂದುವರಿಸುವಂತೆ ಮಾಡಿದೆ ಎಂದು ಡಿಟಿಸಿ ಟ್ವೀಟ್‌ನಲ್ಲಿ ತಿಳಿಸಿದೆ.