ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳ ನಂತರ ದೆಹಲಿ ಕಾಂಗ್ರೆಸ್‌ನ ಉಪಾಧ್ಯಕ್ಷ ಅಲಿ ಮೆಹದಿ ಅವರು ವಾಪಸ್ ತವರು ಪಕ್ಷಕ್ಕೆ ಬಂದಿದ್ದಾರೆ.
ತಮ್ಮ ಟ್ವಿಟರ್‌ನಲ್ಲಿ ಮೆಹದಿ, “ನಾನು ರಾಹುಲ್ ಗಾಂಧಿಯವರ ಕೆಲಸಗಾರ” ಎಂದು ಹೇಳಿದ್ದು ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಆಗಿದ್ದಾರೆ. ತಮ್ಮೊಂದಿಗೆ ಎಎಪಿಗೆ ಸೇರಿದ್ದ ಮುಸ್ತಫಾಬಾದ್‌ನ ಕೌನ್ಸಿಲರ್‌ಗಳಾದ ಸಬಿಲಾ ಬೇಗಂ ಮತ್ತು ಬ್ರಿಜ್‌ಪುರಿಯ ನಾಜಿಯಾ ಖಾತೂನ್ ಅವರೂ ಸಹ ಮರಳಿ ಕಾಂಗ್ರೆಸ್ ಗೆ ವಾಪಸ್ಸಾಗಿರೋದಾಗಿ ತಿಳಿಸಿದ್ದಾರೆ.
ಎಎಪಿ ಸೇರಿದ ಮೆಹದಿ ಅವರ ನಿರ್ಧಾರದ ವಿರುದ್ಧ ಮುಸ್ತಫಾಬಾದ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದ ನಂತರ ಅವರು ಕಾಂಗ್ರೆಸ್‌ಗೆ ಹಿಂತಿರುಗುವುದಾಗಿ ಘೋಷಿಸಿದ್ದಾರೆ.
ಭಾರತೀಯ ಯುವ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಉಸ್ತುವಾರಿ ಮನು ಜೈನ್ ಅವರು ಮೆಹದಿಯನ್ನು “ಹಾವು” ಎಂದು ಕರೆದಿದ್ದರು.
ಆದಾಗ್ಯೂ ಮೆಹದಿ ಅವರು ಕಾಂಗ್ರೆಸ್‌ಗೆ ಮರುಸೇರ್ಪಡೆಯಾಗಿರುವುದಾಗಿ ಘೋಷಿಸಿದ ನಂತರ ಪಕ್ಷದ ಹಲವಾರು ನಾಯಕರು ಆನ್‌ಲೈನ್‌ನಲ್ಲಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
https://twitter.com/syedfarmanahmed/status/1601218875269742592?ref_src=twsrc%5Etfw%7Ctwcamp%5Etweetembed%7Ctwterm%5E1601218875269742592%7Ctwgr%5E8e88858c29696d5c15be9d90d81489cfc8e5e6b7%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Fali-mehdi-rejoins-congress-hours-after-joining-aap-2307444-2022-12-10