ಭಾರತದ 9 ರಾಜ್ಯಗಳು ಒಂದೂಕಾಲು ಶತಮಾನದ ನಂತರ ದಾಖಲೆಯ ತಾಪಮಾನದಲ್ಲಿ ಬದುಕುವಂತಾಗಿದೆ. 122 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಲಡಾಕ್, ಹರ್ಯಾಣ, ಚಂಡೀಗಢ, ದೆಹಲಿ, ಉತ್ತರಖಂಡ, ಹಿಮಾಚಲ ಪ್ರದೇಶ, ರಾಜಸ್ತಾನ, ಚತ್ತೀಸ್ ಘಡ ಮತ್ತು ಗುಜರಾತ್ ರಾಜ್ಯಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಅತ್ಯಧಿಕ ತಾಪಮಾನ ದಾಖಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮಧ್ಯ ಭಾರತದಲ್ಲಿ ಏಪ್ರಿಲ್ ತಿಂಗಳಲ್ಲಿ ಸರಾಸರಿ ಗರಿಷ್ಠ ತಾಪಮಾನ 37.78 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ವಾಯವ್ಯ ಭಾರತದಲ್ಲಿ 35.9 ಡಿಗ್ರಿ ದಾಖಲಾಗಿದೆ.
ಜರ್ಮನಿ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಚರ್ಚೆ
ಇದು ಸಾಮಾನ್ಯ ತಾಪಮಾನಕ್ಕಿಂತ 3.35 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. 1901 ರ ನಂತರ ಒಟ್ಟಾರೆ ಭಾರತದಲ್ಲಿ ದಾಖಲಾಗಿರುವ ನಾಲ್ಕನೇ ಅತ್ಯಧಿಕ ತಾಪಮಾನ 35.05 ಡಿಗ್ರಿಯಾಗಿದೆ.
ದೇಶದಲ್ಲಿ 1973, 2010 ಮತ್ತು 2016 ರಲ್ಲಿ ಅಧಿಕ ತಾಪಮಾನ ದಾಖಲಾಗಿತ್ತು. 2010 ರಲ್ಲಿ ತಾಪಮಾನ ಏರಿಕೆಯಾಗಿ ಬಿಸಿ ಗಾಳಿಗೆ ಅನೇಕ ಜನರು ಸಾವನ್ನಪ್ಪಿದ್ದರು. ಈ ವರ್ಷವೂ ಇಂತಹ ಆತಂಕ ಎದುರಾಗಿದೆ.