ಬದನೆಕಾಯಿ – 2
ಕಡಲೆ ಹಿಟ್ಟು – 1 ಬಟ್ಟಲು
ಅಕ್ಕಿ ಹಿಟ್ಟು – 2 ಚಮಚ
ಅಚ್ಚ ಖಾರದ ಪುಡಿ – 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಓಂಕಾಳು ಸ್ವಲ್ಪ
ಕಾದ ಎಣ್ಣೆ – 1 ಚಮಚ
ಸೋಡಾ – 1 ಚಿಟಿಕೆ
ಎಣ್ಣೆ – ಕರಿಯಲು
ಮಾಡುವ ವಿಧಾನ
ಬದನೆಕಾಯಿಯನ್ನು ತೆಳ್ಳಗೆ ಹೆಚ್ಚಿ ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ಹಾಕಿಡಬೇಕು. ಕಡಲೆಹಿಟ್ಟಿಗೆ ಅಕ್ಕಿಹಿಟ್ಟು, ಓಂಕಾಳು, ಉಪ್ಪು, ಅಚ್ಚಖಾರದ ಪುಡಿ ಮತ್ತು ಸೋಡಾ ಹಾಕಿ ಚೆನ್ನಾಗಿ ಬೆರೆಸಿ ಕಾದ ಎಣ್ಣೆ ಮತ್ತು ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.
ಹೆಚ್ಚಿಟ್ಟುಕೊಂಡ ಬದನೆಕಾಯಿಯನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿದರೆ ಬದನೇಕಾಯಿ ಬಜ್ಜಿ ಸವಿಯಲು ಸಿದ್ಧ.