ಬೆಂಗಳೂರು : 2024-25ನೇ ಸಾಲಿನ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆ ಅನುಷ್ಠಾನಗೊಳಿಸಿ ವಿತರಣೆ ಮಾಡಿರುವ ಸಂಬಂಧ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
2024-25 ನೇ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾದ ಪಿ.ಎಂ.ಪೋಷಣ್-ಮಧ್ಯಾಹ್ನ ಉಪಹಾರ ಯೋಜನೆಯಡಿ PAB ಅನುಮೋದನೆಯಂತೆ ಏಪ್ರಿಲ್-ಮೇ 2024ರ 41 ದಿನಗಳ ಬೇಸಿಗೆ ರಜೆ ಅವಧಿಯಲ್ಲಿ ಬರಪೀಡಿತ ಎಂದು ಗುರುತಿಸಲಾಗಿರುವ ಒಟ್ಟು 31 ಜಿಲ್ಲೆಗಳಲ್ಲಿನ 223 ತಾಲ್ಲೂಕುಗಳಲ್ಲಿ 1-8 ನೇ ತರಗತಿಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಸಂಬಂಧಿಸಿದಂತೆ ಕೇಂದ್ರದ ಪಾಲಿನ ಅನುದಾನ ರೂ.2958.87 ಲಕ್ಷಗಳು ಸಂವಾದಿ ರಾಜ್ಯದ ಪಾಲಿನ ಅನುದಾನ ರೂ 1742.74 ಲಕ್ಷಗಳು ಹಾಗೂ ರಾಜ್ಯದ ಹೆಚ್ಚುವರಿ ಅನುದಾನ (Top-up) ರೂ.2692.17 ಲಕ್ಷಗಳು ಸೇರಿ ಒಟ್ಟಾರೆಯಾಗಿ ರೂ.7393.78 ಲಕ್ಷಗಳ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಲಾಗಿರುತ್ತದೆ.
ಉಲ್ಲೇಖಿತ (3) ರ ಆದೇಶದಂತೆ ಜಿಲ್ಲಾ ಮತ್ತು ತಾಲ್ಲೂಕುವಾರು ಈಗಾಗಲೇ ಸಲ್ಲಿಸಿರುವ ಅನುದಾನ ಬೇಡಿಕೆ ಮತ್ತು ಹಂಚಿಕೆ ಪಟ್ಟಿಯಂತೆ ಲೆಕ್ಕ ಶೀರ್ಷಿಕವಾರು ಈ ಕಳಂಕಂಡಂತೆ ಅನುದಾನ ನಿಗದಿಪಡಿಸಿದ್ದು ಬಿಡುಗಡೆಗೊಳಿಸಿ ಬಳಸುವಂತೆ ಸೂಚಿಸಿದೆ.


