ರಾಮನಗರ: ರಾಮನಗರ ಜಿಲ್ಲೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಅಧಿಕಾರಿಗಳು ದಾಖಲೆಯಿಲ್ಲದ 220 ಹಾಟ್ ಬಾಕ್ಸ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರಾಮನಗರದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರದ ಹವಾಮಾನ ಇಲಾಖೆ ಪಕ್ಕದ ಗೋದಾಮಿನಲ್ಲಿ ಹಾಟ್ ಬಾಕ್ಸ್ ಗಳನ್ನು ದಾಸ್ತಾನು ಮಾಡಲಾಗಿತ್ತು. ಇವುಗಳಲ್ಲಿ 120 ಹಾಟ್ ಬಾಕ್ಸ್ ಗಳಿಗೆ ಮಾತ್ರ ಬಿಲ್ ದೊರೆತಿದ್ದು, ಬಾಕಿ ಉಳಿದ 100 ಹಾಟ್ ಬಾಕ್ಸ್ ಗಳಿಗೆ ಬಿಲ್ ಇರಲಿಲ್ಲ. ಈ ಸಂಬಂಧ ಮಾಲೀಕರು ದೀಪಾವಳಿ ಹಬ್ಬಕ್ಕೆ ಉಡುಗೊರೆ ನೀಡಲು ತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಚುನಾವಣಾ ಅಧಿಕಾರಿಗಳು ಹಾಟ್ ಬಾಕ್ಸ್ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.