ಅಮೆರಿಕದ ಅರಿಜೋನಾ ಮರುಭೂಮಿಯಲ್ಲಿ ಭಾನುವಾರ ಬಿಸಿ-ಗಾಳಿ ಬಲೂನ್ ಪತನಕ್ಕೀಡಾದ ಹಿನ್ನೆಲೆ ನಂತರ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಎಲೋಯ್ ಬಳಿ ಈ ಘಟನೆ ಸಂಭವಿಸಿದ್ದು, ಬಲೂನ್ ನಲ್ಲಿ ಒಟ್ಟು 13 ಜನರಿದ್ದು, ಎಂಟು ಜನರು ಅದರಿಂದ ಜಿಗಿದಿದ್ದಾರೆ. ಪೈಲಟ್ ಮತ್ತು ಸವಾರರು ಸೇರಿದಂತೆ ಐದು ಜನರು ಒಳಗಡೆ ಉಳಿದಿದ್ದರು.
ಎಲೋಯ್ನ ಸನ್ಶೈನ್ ಬ್ಲವ್ಡ್ ಮತ್ತು ಹನ್ನಾ ರಸ್ತೆಯ ಪೂರ್ವದ ಮರುಭೂಮಿ ಪ್ರದೇಶದಲ್ಲಿ ದುರಂತ ಹಾಟ್ ಏರ್ ಬಲೂನ್ ಅಪಘಾತ ಸಂಭವಿಸಿದೆ. ಈ ಘಟನೆಯ ಪರಿಣಾಮವಾಗಿ ನಾಲ್ವರು ಮೃತಪಟ್ಟಿದ್ದು, ಓರ್ವ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ ಎಂದು ಎಲೋಯ್ ಪೊಲೀಸ್ ಇಲಾಖೆ ತಿಳಿಸಿದೆ.