ದೇಶದ ಅತ್ಯಂತ ಜನಪ್ರಿಯ ಸುದ್ದಿ ವಾಹಿನಿಗಳಲ್ಲಿ ಒಂದಾದ ನವದೆಹಲಿ ಟೆಲಿವಿಷನ್ ಲಿಮಿಟೆಡ್‌ನಲ್ಲಿ ಹೆಚ್ಚಿನ ಪಾಲನ್ನು ಉದ್ಯಮಿ ಗೌತಮ್ ಅದಾನಿ ಖರೀದಿಸಿದ್ದಾಗಿ ಹೇಳಲಾಗಿದೆ.
ಈ ಮಧ್ಯೆ ಎನ್.ಡಿ. ಟಿವಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ ಮತ್ತು ನವದೆಹಲಿ ಟೆಲಿವಿಷನ್ ಲಿಮಿಟೆಡ್ (ಎನ್‌ಡಿಟಿವಿ) ಅಥವಾ ಅದರ ಸಂಸ್ಥಾಪಕ-ಪ್ರವರ್ತಕರೊಂದಿಗೆ ಯಾವುದೇ ಚರ್ಚೆಯಿಲ್ಲದೆ, ವಿಶ್ವಪ್ರಧನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದೆ. ಸೋಮವಾರದವರೆಗೆ, ಎನ್.ಡಿ. ಟಿವಿ ತನ್ನ ಪ್ರವರ್ತಕರು ಕಂಪನಿಯಲ್ಲಿನ ತಮ್ಮ ಪಾಲನ್ನು ಮಾರಾಟ ಮಾಡಲು ಮಾತುಕತೆ ನಡೆಸುತ್ತಿಲ್ಲ ಎಂದು ಸಮರ್ಥಿಸಿಕೊಂಡಿತ್ತು.
ಸೋಮವಾರವಷ್ಟೇ ಎನ್.ಡಿ. ಟಿವಿ ತನ್ನ ಸಂಸ್ಥಾಪಕರ ಷೇರುಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಷೇರು ವಿನಿಮಯ ಕೇಂದ್ರಗಳಿಗೆ ತಿಳಿಸಿತ್ತು.
ಅದಾನಿ ಗ್ರೂಪ್ ಸಂಸ್ಥೆಯು ಮೊದಲು ಪ್ರತಿಸ್ಪರ್ಧಿ ಬಿಲಿಯನೇರ್ ಮುಖೇಶ್ ಅಂಬಾನಿಯೊಂದಿಗೆ ಸಂಪರ್ಕ ಹೊಂದಿದ್ದ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಕಂಪನಿಯು 2008-09 ರಲ್ಲಿ ಎನ್.ಡಿ. ಟಿವಿಗೆ 250 ಕೋಟಿ ರೂ. ಸಾಲ ನೀಡಿತ್ತು. ಅದಾನಿ ಸಮೂಹ ಸಂಸ್ಥೆಯು ಈಗ ಆ ಸಾಲವನ್ನು ಸುದ್ದಿ ವಾಹಿನಿ ಕಂಪನಿಯಲ್ಲಿ 29.18 ರಷ್ಟು ಪಾಲನ್ನು ಪರಿವರ್ತಿಸುವ ಆಯ್ಕೆಯನ್ನು ಚಲಾಯಿಸಿದೆ.