ಬೆಂಗಳೂರು: ನಾಳೆಯಿಂದ ಕಠಿಣ ಲಾಕ್ಡೌನ್ ಜಾರಿ ಹಿನ್ನೆಲೆ ಲಗೇಜ್ ಸಮೇತ ಜನ ಊರಿಗೆ ಹೊರಟಿದ್ದಾರೆ. ನೆಲಮಂಗಲದ ನವಯುಗ ಟೋಲ್ ನಲ್ಲಿ ವಾಹನಗಳ ದಟ್ಟಣೆ ಕಂಡುಬಂದಿದೆ.
ತುಮಕೂರು-ಶಿರಾ, ಚಿಕ್ಕಮಗಳೂರು, ಶಿವಮೊಗ್ಗ ಬಳ್ಳಾರಿ ಸೇರಿದಂತೆ ವಿವಿಧೆಡೆ ನೂರಾರು ವಾಹನಗಳು ತೆರಳುತ್ತಿವೆ. ಟಫ್ ರೂಲ್ಸ್ ಜಾರಿ ಕಾರಣ ಬೆಂಗಳೂರಿನಲ್ಲಿ ದುಡಿಮೆಗೆ ಕಷ್ಟವಾಗಲಿದ್ದು, ಈ ಕಾರಣದಿಂದ ಬಹುತೇಕರು ಊರಿಗೆ ತೆರಳಿದ್ದಾರೆ. ಈಗಾಗಲೇ ಜಾರಿಯಲ್ಲಿರುವ ಲಾಕ್ ಡೌನ್ ಮೇ 12 ಕ್ಕೆ ಮುಕ್ತಾಯವಾಗಬಹುದು ಎಂದು ಬಹುತೇಕರು ಉಳಿದುಕೊಂಡಿದ್ದರು. ಆದರೆ, ಲಾಕ್ ಡೌನ್ ಮೇ 24 ರ ವರೆಗೆ ಮುಂದುವರೆಯುವುದರಿಂದ ಸ್ವಂತ ಊರುಗಳಿಗೆ ಹೆಚ್ಚಿನ ಸಂಖ್ಯೆಯ ಜನ ತೆರಳಿದ್ದಾರೆ.
ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿಯೂ ಕೊರೋನಾ ಸೋಂಕು ಹೆಚ್ಚಾಗುವ ಆತಂಕ ಎದುರಾಗಿದೆ. ಬೆಂಗಳೂರಿನಲ್ಲಿ ಬೆಡ್ ಸಿಗದೇ ಸೋಂಕಿತರು ಜಿಲ್ಲಾ ಕೇಂದ್ರದ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ಸೋಂಕು ಹೆಚ್ಚಾದರೆ, ಮೊದಲೇ ಒತ್ತಡದಲ್ಲಿರುವ ಜಿಲ್ಲಾಸ್ಪತ್ರೆಗಳ ಮೇಲೆ ಇನ್ನಷ್ಟು ಒತ್ತಡ ಬೀಳಲಿದೆ ಎನ್ನಲಾಗಿದೆ.