ಕೋವಿಡ್ ಲಸಿಕೆ ತೆಗೆದುಕೊಳ್ಳಲು ಇಚ್ಛಿಸದ ರೋಗಿಯೊಬ್ಬರಿಗೆ ಹೃದಯ ಕಸಿ ಮಾಡಲು ಅಮೆರಿಕದ ಬೋಸ್ಟನ್‌ನ ಆಸ್ಪತ್ರೆಯೊಂದು ನಿರಾಕರಿಸಿದೆ. 31 ವರ್ಷದ ಡಿಜೆ ಫರ್ಗೂಸನ್ ಎಂಬ ರೋಗಿಯು ಹೃದಯ ಕಸಿಗಾಗಿ ಆದ್ಯತೆಯ ಪಟ್ಟಿಯಲ್ಲಿದ್ದರು. ಆದರೆ ಸಿಬಿಎಸ್ ಬೋಸ್ಟನ್ ವರದಿಯ ಪ್ರಕಾರ, ಅವರನ್ನು ಈಗ ಈ ಪಟ್ಟಿಯಿಂದ ಹೊರಗಿಡಲಾಗಿದೆ.
ಕೋವಿಡ್ ಲಸಿಕೆಯು ತನ್ನ ಮಗ ನಂಬಿರುವ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅವರ ತಂದೆ ಹೇಳಿಕೊಂಡಿದ್ದು, ತನ್ನ ಮಗನ ನಡೆಯನ್ನು ಸಮರ್ಥಿಸಿದ್ದಾರೆ.
ಚಿತ್ರ ನಿರ್ಮಾಪಕನಾಗುವ ಕನಸು ಕಂಡಿದ್ದರು ಈ ಖ್ಯಾತ ಉದ್ಯಮಿ…!
ಫರ್ಗೂಸನ್‌ರ ಹೃದಯ ಕಸಿ ಶಸ್ತ್ರಚಿಕಿತ್ಸೆ ಬೋಸ್ಟನ್‌ನ ಬ್ರಿಗಮ್ ಮತ್ತು ಮಹಿಳಾ ಆಸ್ಪತ್ರೆಯಲ್ಲಿ ನಡೆಯಬೇಕಿತ್ತು. ಆದರೆ ಈಗ, ಆಸ್ಪತ್ರೆಯು ಶಸ್ತ್ರಚಿಕಿತ್ಸೆ ಕೈಗೊಳ್ಳಲು ನಿರಾಕರಿಸುತ್ತಿದೆ.
“ಅಮೆರಿಕದಲ್ಲಿ ನಡೆಯುವ ಇತರ ಅನೇಕ ಕಸಿ ಕಾರ್ಯಕ್ರಮಗಳಂತೆ – ಕೋವಿಡ್ -19 ಲಸಿಕೆಯು ಕಸಿ ಅಭ್ಯರ್ಥಿಗಳಿಗೆ ಅಗತ್ಯವಿರುವ ಜೀವನಶೈಲಿ ನಡವಳಿಕೆಗಳಲ್ಲಿ ಒಂದಾಗಿದೆ ಮತ್ತು ಈ ಸಂಬಂಧ ಯಶಸ್ವಿ ಕಾರ್ಯಾಚರಣೆಗೆ ಉತ್ತಮ ಅವಕಾಶವನ್ನು ಸೃಷ್ಟಿಸುತ್ತದೆ ಮತ್ತು ರೋಗಿಯು ಕಸಿ ನಂತರ ಬದುಕುಳಿಯುವ ಸಾಧ್ಯತೆಗಳೂ ಹೆಚ್ಚುತ್ತವೆ” ಎಂದು ದಿ ಗಾರ್ಡಿಯನ್‌ಗೆ ಆಸ್ಪತ್ರೆ ವಿವರಿಸಿದೆ.
ಆಸ್ಪತ್ರೆಯ ನಿಲುವನ್ನು ಈ ಪ್ರದೇಶದ ವೈದ್ಯಕೀಯ ತಜ್ಞರು ಬೆಂಬಲಿಸುತ್ತಿದ್ದಾರೆ. ಅಂಗಾಂಗ ಕಸಿ ನಂತರ ತಕ್ಷಣದ ಪರಿಣಾಮದಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ ಮತ್ತು ರೋಗಿಯು ಕೋವಿಡ್ ವಿರುದ್ಧ ಲಸಿಕೆಯನ್ನು ಪಡೆದಿದ್ದರೆ, ಅವರು ಕೋವಿಡ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಉತ್ತಮ ಅವಕಾಶವನ್ನು ಹೊಂದಿರುತ್ತಾರೆ ಎಂದು ತಜ್ಞರು ಹೇಳುತ್ತಾರೆ.
ಫರ್ಗೂಸನ್ ಅವರ ಕುಟುಂಬವು ತಮ್ಮ ಭವಿಷ್ಯದ ಕ್ರಮದ ಬಗ್ಗೆ ಸ್ಪಷ್ಟನೆ ಕೊಟ್ಟಿಲ್ಲ.