alex Certify ಹಾಡಹಗಲೇ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ; ತಾಯಿ ಕೈಯಲ್ಲಿದ್ದ ಮಗು ಮಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ಆಸ್ಪತ್ರೆಯಲ್ಲಿ ಆಘಾತಕಾರಿ ಘಟನೆ; ತಾಯಿ ಕೈಯಲ್ಲಿದ್ದ ಮಗು ಮಾಯ

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ತಾಯಿ ಕೈಯಲ್ಲಿದ್ದ ಮಗುವನ್ನು ಕದ್ದೊಯ್ದ ಘಟನೆ ನಡೆದಿದೆ. ಹಾಡಹಗಲೇ ಮಗುಕಳವು ಮಾಡಲಾಗಿದ್ದು ಆತಂಕಕ್ಕೆ ಕಾರಣವಾಗಿದೆ.

ಕರುಳಕುಡಿ ಕಳೆದುಕೊಂಡ ತಾಯಿ ಕಣ್ಣೀರಿಟ್ಟಿದ್ದಾರೆ. ಕುಂದಗೋಳ ನೆಹರೂ ನಗರದ ಸಲ್ಮಾ ಅವರು ಮಗುಇ ಕಳೆದುಕೊಂಡವರು. ಹುಷಾರಿಲ್ಲದ 40 ದಿನದ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಅವರು ಜೂನ್ 10 ರಿಂದ ಆಸ್ಪತ್ರೆಯಲ್ಲಿದ್ದರು. ಇಂದು ಮಧ್ಯಾಹ್ನ ಮಗು ಅಳುತ್ತಿದ್ದ ಕಾರಣ ವಾರ್ಡ್ ಹೊರಗೆ ಮಗುವನ್ನು ಎತ್ತಿಕೊಂಡು ಬಂದ ವೇಳೆಯಲ್ಲಿ ಅಪರಿಚಿತ ವ್ಯಕ್ತಿ ಮಗುವನ್ನು ಕಸಿದುಕೊಂಡು ಹೋಗಿದ್ದಾನೆ ಎಂದು ಹೇಳಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಆಸ್ಪತ್ರೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸಿ ಮಗುವನ್ನು ಪತ್ತೆ ಮಾಡುವುದಾಗಿ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...