ಬೆಂಗಳೂರು: ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಅಪರಿಚಿತ ಮಹಿಳೆ ನವಜಾತ ಶಿಶು ಕದ್ದು ಪರಾರಿಯಾಗಿದ್ದಾಳೆ. ಈ ಕುರಿತಾಗಿ ವಿವಿ ಪುರ ಠಾಣೆ ಪೊಲೀಸರಿಗೆ ಮಗುವಿನ ಪೋಷಕರು ದೂರು ನೀಡಿದ್ದಾರೆ.
ದೂರವಾಣಿ ನಗರದ ಆರ್ಶಿಯಾಗೆ ನವೆಂಬರ್ 9 ರಂದು ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಡರಾತ್ರಿ ಅವರಿಗೆ ಹೆಣ್ಣು ಮಗು ಜನಿಸಿದ್ದು ಮಗುವಿನ ಹೊಟ್ಟೆಯಲ್ಲಿ ನೀರು ಸೇರಿಕೊಂಡಿದೆ ಎಂದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ.
ನವೆಂಬರ್ 11 ರಂದು ಆರ್ಶಿಯಾ ಅವರ ಪತಿ ಮಗುವನ್ನು ತೋರಿಸಲು ಕೇಳಿಕೊಂಡಿದ್ದಾರೆ. ಈ ವೇಳೆ ನಿಮ್ಮ ಕಡೆಯವರು ಯಾರೋ ಮಗುವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ವೈದ್ಯರು, ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಆದರೆ, ಆರ್ಶಿಯಾ ಅವರ ಸಂಬಂಧಿಕರು ಮಗುವನ್ನು ಪಡೆದುಕೊಂಡಿಲ್ಲ. ಅಪರಿಚಿತ ಮಹಿಳೆ ಮಗು ಕದ್ದು ಪರಾರಿಯಾಗಿದ್ದಾಳೆ ಎನ್ನಲಾಗಿದೆ.