ರಾಜ್ಯದ ಜನತೆ ನಿನ್ನೆ ಭರ್ಜರಿಯಾಗಿ ಯುಗಾದಿ ಹಬ್ಬ ಆಚರಿಸಿ, ಬೇವು ಬೆಲ್ಲ, ಒಬ್ಬಟ್ಟು ತಿಂದು ಖುಷಿಪಟ್ಟಿದ್ರು. ಅಂತೆಯೇ ಇವತ್ತೂ ಕೂಡ ಹೊಸತೊಡಕು ಆಚರಿಸೋಕೆ ರೆಡಿಯಾಗಿದ್ದಾರೆ. ಆದರೆ ಕೆಲವೆಡೆ ಬುಧವಾರ ಚಂದ್ರ ದರ್ಶನವಾಗದ ಹಿನ್ನಲೆಯಲ್ಲಿ ಇಂದು ಮತ್ತೊಮ್ಮೆ ಸಿಹಿ ಅಡುಗೆ ಮಾಡಿ ನಾಳೆ ಹೊಸ ತೊಡಕು ಆಚರಿಸಲಿದ್ದಾರೆ.
ಮಟನ್ – ಚಿಕನ್ ಬೆಲೆ ಗಗನಕ್ಕೇರಿದ್ದರೂ ಹೊಸ ತೊಡಕು ಆಚರಣೆ ಸಂಭ್ರಮವೇನು ಕಡಿಮೆಯಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಪಾಲು ಹಾಕುತ್ತಿದ್ದರೆ, ನಗರ ಪ್ರದೇಶಗಳಲ್ಲಿ ಮಾಂಸದಂಗಡಿಗಳ ಮುಂದೆ ಜನ ಖರೀದಿಸುತ್ತಿದ್ದಾರೆ.
ರಾಜ್ಯದ ಅನೇಕ ಕಡೆಗಳಲ್ಲಿ ಹೊಸತೊಡಕನ್ನು ಆಚರಿಸುತ್ತಿದ್ದು, ಹಬ್ಬಕ್ಕೆ ಚಿಕನ್ – ಮಟನ್ ಮಾಡಲು ಜನರು ಮಾಂಸದಂಗಡಿಗಳ ಮುಂದೆ ನಿಂತಿರುವುದು ಸಾಮಾನ್ಯವಾಗಿತ್ತು. ಹಳ್ಳಿಗಳಲ್ಲಿ ಕೆಲವರು ಸೇರಿಕೊಂಡು ಶಕ್ತ್ಯಾನುಸಾರ ಕುರಿಗಳನ್ನು ಕೊಯ್ದು ಪಾಲು ಹಾಕಿಕೊಳ್ಳುತ್ತಿದ್ದಾರೆ.