ಚಿತ್ರದುರ್ಗ: ಗಣಪತಿ ಪೂಜೆ, ಉತ್ಸವದ ವಿರುದ್ಧ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮತ್ತೆ ಕಿಡಿಕಾರಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯಲ್ಲಿ ನಾಟಕೋತ್ಸವದಲ್ಲಿ ಮಾತನಾಡಿದ ಶ್ರೀಗಳು, ಗಣಪತಿ ಪೂಜೆ ಬಸವ ಸಂಸ್ಕೃತಿ ಅಲ್ಲ ಎಂದು ನಾನು ಹೇಳಿದ್ದೇನೆ. ಗಣಪತಿ ಪೌರಾಣಿಕ ಕಲ್ಪನೆ. ಗಣಪತಿ ಯಾರಿಗಾದರೂ ವರ ಅಥವಾ ಶಾಪ ಕೊಟ್ಟಿದ್ದಾನೆಯೇ ಎಂದು ಪ್ರಶ್ನಿಸಿದ್ದಾರೆ.
ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಗಣಪತಿ ದೇವಸ್ಥಾನಕ್ಕೆ ಹೋಗುತ್ತಾರೆ. ಓದದಿದ್ದರೆ, ಉತ್ತರ ಬರೆದಿದ್ದರೆ ಪಾಸ್ ಆಗಲು ಸಾಧ್ಯವೇ? ಗಣಪತಿ ಎಂಬದು ನಂಬಿಕೆ ಅಷ್ಟೇ. ಗಣಪತಿ ಉತ್ಸವದ ವೇಳೆ ಕುಡಿದು ಕುಣಿದು ಮತ್ತೇನೇನೋ ಮಾಡುತ್ತಾರೆ. ರಾಜಕಾರಣಿಗಳು ಕೆಲ ಸಮಯ ಗಣಪತಿ ಉತ್ಸವಕ್ಕೆ ಹೋಗಿ ಬರುತ್ತಾರೆ. ಈ ಬಗ್ಗೆ ಪ್ರತಿಭಟನೆ ಮಾಡಬೇಕಾದವರು ಯಾರು ಎಂದು ಪ್ರಶ್ನಿಸಿದ್ದಾರೆ. ಸತ್ಯ ಹೇಳಿದ್ದಕ್ಕೆ ನಮ್ಮ ವಿರುದ್ಧ ಮುಗಿದಿದ್ದರೆ ಭಯಪಡುವ ಅಗತ್ಯವಿಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.