ಫಿಟ್ನೆಸ್ ವಿಚಾರದಲ್ಲಿ ಈಗಿನ ಆಟಗಾರರಿಗೂ ಮಾದರಿಯಾಗಿರುವ ಟೀಂ ಇಂಡಿಯಾ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಯಾವಾಗಲೂ ತಮ್ಮ ಓಟದ ವೇಗವನ್ನು ಪರೀಕ್ಷಿಸಿಕೊಳ್ಳಲು ಇಷ್ಟಪಡುತ್ತಾರೆ.
ದೇವ ವೃಕ್ಷ ʼಅರಳಿ ಮರʼದ ಮಹಿಮೆ ತಿಳಿಯಿರಿ
ಆಗಾಗ ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಸಹ ಆಟಗಾರರೊಂದಿಗೆ ರನ್ನಿಂಗ್ ರೇಸ್ ಚಾಲೆಂಜ್ ಮಾಡುವ ಧೋನಿ ಇದೀಗ ವಿಶಿಷ್ಟ ಸಂಗಾತಿಯೊಬ್ಬರೊಂದಿಗೆ ಓಟದ ಚಾಲೆಂಜ್ ಮಾಡಿದ್ದಾರೆ. ಅದು ಯಾರೆಂದರೆ ಖುದ್ದು ತಮ್ಮದೇ ಫಾರಂನಲ್ಲಿರುವ ಕುದುರೆ ಮರಿ.
ಮಹತ್ವದ ಬೆಳವಣಿಗೆ: RSS ನಾಯಕರ ಭೇಟಿ ಮಾಡಿದ ಬಿಜೆಪಿ ಶಾಸಕ ಬೆಲ್ಲದ
ರಾಂಚಿಯಲ್ಲಿರುವ ತಮ್ಮ ಫಾರಂನಲ್ಲಿ ತಮ್ಮದೇ ಮುದ್ದಿನ ಕುದುರೆ ಮರಿಯೊಂದಿಗೆ ತಮ್ಮ ಓಟದ ವೇಗವನ್ನು ಹೋಲಿಕೆ ಮಾಡಿಕೊಂಡಿದ್ದಾರೆ ಧೋನಿ. ಇಬ್ಬರ ಈ ರೇಸ್‌ನ ವಿಡಿಯೋವನ್ನು ಧೋನಿ ಪತ್ನಿ ಸಾಕ್ಷಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
https://www.instagram.com/p/CQBYaUqnx49/?utm_source=ig_web_copy_link