ಓಟದ ಟ್ರ್ಯಾಕ್ ನಿಂದ ತಪ್ಪಿಸಿಕೊಂಡ ಕುದುರೆಯೊಂದು ರಸ್ತೆಯ ಹೆದ್ದಾರಿಯಲ್ಲಿ ಓಡಿರುವ ವಿಲಕ್ಷಣ ಘಟನೆ ಇಂಡಿಯಾನಾದಲ್ಲಿ ನಡೆದಿದೆ.
ಹೌದು, ರೇಸ್ ಟ್ರ್ಯಾಕ್ ನಿಂದ ತಪ್ಪಿಸಿಕೊಂಡ ಕುದುರೆ ಇಂಡಿಯಾನಾದ ಇವಾನ್ಸ್ ವಿಲ್ಲೆಯ ಹೆದ್ದಾರಿಯಲ್ಲಿ ಓಡುತ್ತಿರುವುದನ್ನು ಕಂಡ ವಾಹನ ಸವಾರರು ದಿಗ್ಭ್ರಮೆಗೊಳಗಾದರು. ಈ ವಿಡಿಯೋವನ್ನು ಪತ್ರಕರ್ತ ಬ್ಲೇಕ್ ಸ್ಯಾಂಡ್ ಲಿನ್ ಎಂಬಾತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ಭಾರಿ ವೈರಲ್ ಆಗಿದೆ.
ಬೀಚ್ ನಲ್ಲಿ ಯುವತಿ ಯೋಗ ಮಾಡುತ್ತಿದ್ದಾಗಲೇ ನಡೆಯಿತು ಶಾಕಿಂಗ್ ಘಟನೆ
“ಓಟದ ಕುದುರೆಯು ತನ್ನ ಸವಾರನಿಗೆ ಹೊಡೆದು ಟ್ರ್ಯಾಕ್ ನಿಂದ ತಪ್ಪಿಸಿಕೊಂಡಿದೆ. ನಂತರ ಯುಎಸ್-41 ಹೆದ್ದಾರಿ ಉದ್ದಕ್ಕೂ ಓಡಿದ್ದು, ಇವಾನ್ಸ್ ವಿಲ್ಲೆ ವಾಟರ್ ಡಿಪಾರ್ಟ್ಮೆಂಟ್ ನಲ್ಲಿ ಕುದುರೆಯನ್ನು ರಕ್ಷಿಸಲಾಗಿದೆ” ಎಂದು ಸ್ಯಾಂಡ್ವಿನ್ ಟ್ವೀಟ್ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಒಂದು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಕುದುರೆ ತಪ್ಪಿಸಿಕೊಂಡು ಓಡುತ್ತಿದ್ದಂತೆ ಹಲವು ಮಂದಿ ಮೈಲಿಗಳ ದೂರ ಹಿಂಬಾಲಿಸಿ ಕುದುರೆಯನ್ನು ರಕ್ಷಿಸಿದ್ದಾರೆ ಎಂದು ಹೇಳಲಾಗಿದೆ.