ಉತ್ತರಾಖಂಡದಲ್ಲಿರುವ ಕೇದಾರನಾಥ ಧಾಮದಲ್ಲಿ ಕುದುರೆ ಮರಿಗಳ ನಿರ್ವಾಹಕರು ಹಾಗೂ ಯಾತ್ರಿಗಳ ನಡುವಿನ ಕಚ್ಚಾಟದ ವಿಡಿಯೋವೊಂದು ವೈರಲ್ ಆಗಿದೆ.
ಕುದುರೆ ಮರಿಗಳ ನಿರ್ವಾಹಕರು ಯಾತ್ರಿಗಳೊಂದಿಗೆ ವಾಗ್ವಾದ ನಡೆಸುವ ವೇಳೆ ಕಡ್ಡಿಗಳಿಂದ ಅವರ ಮೇಲೆ ಹಲ್ಲೆ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ತಿಳಿಸಿದ ರುದ್ರಪ್ರಯಾಗ್ ಪೊಲೀಸರು, “11ನೇ ಜ್ಯೋತಿರ್ಲಿಂಗ ಬಾಬಾ ಕೇದಾರನ ಸನ್ನಿಧಿಗೆ ಬರುವ ಪ್ರತಿಯೊಬ್ಬ ಯಾತ್ರಿಗೂ ಸುರಕ್ಷತೆಯ ಭಾವ ಮೂಡಿಸಲಾಗಿದೆ. ಯಾತ್ರಿಗಳು ತಮ್ಮೊಂದಿಗೆ ಅನುಚಿತವಾಗಿ ವರ್ತಿಸುವ ಮಂದಿಯೊಂದಿಗೆ ಹೇಗೆ ಕ್ರಮ ತೆಗೆದುಕೊಳ್ಳಬೇಕೆಂದು ಆ ಜಾಗದಲ್ಲಿ ಕರ್ತವ್ಯದಲ್ಲಿರುವವರಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ,” ಎಂದು ತಿಳಿಸಿದೆ.
ಮೂವರು ಯಾತ್ರಿಗಳ ಮೇಲೆ ಹಲ್ಲೆಗೆ ಮುಂದಾದ ಐವರು ಶಂಕಿತರ ವಿಚಾರಣೆ ನಡೆಸುತ್ತಿದ್ದು, ಅವರ ವಿರದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.