ಜನರು ಚಿತ್ರಮಂದಿರದ ಪರದೆಯ ಮುಂದೆ ನೃತ್ಯ ಮಾಡುವುದನ್ನು ಅಥವಾ ತಾವೂ ಹಾಡು ಹೇಳುವುದನ್ನು, ಸಿಳ್ಳೆ ಹೊಡೆಯುವುದನ್ನು ನೀವು ನೋಡಿರಬಹುದು. ಅದೇ ರೀತಿ ಭಯಾನಕ ಚಲನಚಿತ್ರವನ್ನು ವೀಕ್ಷಿಸುವಾಗ ಭಯದಿಂದ ಕಿರುಚುವ ಶಬ್ದವನ್ನೂ ಕೇಳಿರಲಿಕ್ಕೆ ಸಾಕು.
ಆದರೆ ಜನರು ಎಷ್ಟು ಕಿರುಚುತ್ತಾರೆ ಎಂಬ ಪ್ರಯೋಗವನ್ನು ಚಿತ್ರಮಂದಿರದಲ್ಲಿ ಮಾಡಲಾಗಿದೆ. ಈ ಅಸಾಮಾನ್ಯ ಮತ್ತು ವಿಶಿಷ್ಟ ಸನ್ನಿವೇಶವು ಫ್ರೆಂಚ್ ಚಿತ್ರಮಂದಿರದಲ್ಲಿ ನಡೆದಿದೆ. ಚಲನಚಿತ್ರ ಪ್ರೇಕ್ಷಕರು ‘ಸ್ಕ್ರೀಮ್ VI’ ಚಲನಚಿತ್ರವನ್ನು ವೀಕ್ಷಿಸುವ ಮೊದಲು ಅವರಿಗೆ ಕಿರುಚಲು ಹೇಳಲಾಗಿದೆ. ಇದರ ವಿಡಿಯೋ ವೈರಲ್ ಆಗಿದೆ.
ಇಂಟರ್ನೆಟ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಜನರ ಕಿರುಚಾಟವನ್ನು ಕೇಳಬಹುದು. ಮಾನಿಟರ್ ವೀಕ್ಷಕರ ಕಿರುಚಾಟವನ್ನು ರೆಕಾರ್ಡ್ ಮಾಡುತ್ತದೆ. ಇದರಲ್ಲಿ ಜನರು ಸಂಪೂರ್ಣವಾಗಿ ಕಿರುಚಿ ಸಮಾಧಾನ ಪಟ್ಟುಕೊಂಡ ಬಳಿಕ ಚಿತ್ರದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಇದೊಂದು ರೀತಿಯಲ್ಲಿ ಜನರ ಮನಸ್ಸಿಗೆ ನಾಟುತ್ತದೆ. ಚಿತ್ರ ವೀಕ್ಷಣೆಯನ್ನು ನೆಮ್ಮದಿಯಿಂದ ಮಾಡುವುದಾಗಿ ಹೇಳಲಾಗಿದೆ.