alex Certify shocking video| ಪೋರ್ಶೆ ಕಾರ್ ಭೀಕರ ಅಪಘಾತ ಬೆನ್ನಲ್ಲೇ ಬೆಚ್ಚಿಬೀಳಿಸಿದ ಮತ್ತೊಂದು ಭಯಾನಕ ಆಕ್ಸಿಡೆಂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

shocking video| ಪೋರ್ಶೆ ಕಾರ್ ಭೀಕರ ಅಪಘಾತ ಬೆನ್ನಲ್ಲೇ ಬೆಚ್ಚಿಬೀಳಿಸಿದ ಮತ್ತೊಂದು ಭಯಾನಕ ಆಕ್ಸಿಡೆಂಟ್

Horrific Video: Speeding Car Rams Into Multiple Bikes

ಮಹಾರಾಷ್ರ್-ದ ಪುಣೆಯಲ್ಲಿ ಪೋರ್ಶೆ ಕಾರ್ ಭೀಕರ ಅಪಘಾತ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಕೊಲ್ಹಾಪುರದಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ.

ವೇಗವಾಗಿ ಬಂದ ಕಾರ್ ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು ಕಾರ್ ಚಾಲಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಇತರ ಆರು ಮಂದಿ ಗಾಯಗೊಂಡಿದ್ದಾರೆ.

ಕೊಲ್ಹಾಪುರದಲ್ಲಿ ಟ್ರಾಫಿಕ್ ಸಿಗ್ನಲ್ ಇಲ್ಲದ ಜನನಿಬಿಡ ರಸ್ತೆಯಲ್ಲಿ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿಯಾಗಿದ್ದ 72 ವರ್ಷದ ವಸಂತ್ ಎಂ ಚವಾಣ್ ವೇಗವಾಗಿ ಸ್ಯಾಂಟ್ರೋ ಕಾರ್ ಚಲಾಯಿಸುತ್ತಿದ್ದರು. ಈ ವೇಳೆ ಕಾರ್ ನಾಲ್ಕು ಬೈಕ್ ಗಳಿಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಬೈಕ್ ಸವಾರರು ಗಾಳಿಯಲ್ಲಿ ಹಾರಿ ಹಲವು ಅಡಿ ದೂರಕ್ಕೆ ಎಸೆಯಲ್ಪಟ್ಟರು. ಅಪಘಾತದಿಂದ ಬೈಕ್‌ನಲ್ಲಿದ್ದ ಪುರುಷ ಮತ್ತು ಮಹಿಳೆ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ರಸ್ತೆಯ ಇನ್ನೊಂದು ತುದಿಯಲ್ಲಿ ನಿಂತಿದ್ದ ವಾಹನಕ್ಕೆ ಸ್ಯಾಂಟ್ರೋ ಡಿಕ್ಕಿ ಹೊಡೆದಿದ್ದು ಪಲ್ಟಿಯಾಗಿದೆ.

ವಸಂತ್ ಎಂ ಚವಾಣ್ ಅವರು ಬಹುಶಃ ಅಸ್ವಸ್ಥರಾಗಿದ್ದು ಕಾರಿನ ನಿಯಂತ್ರಣವನ್ನು ಕಳೆದುಕೊಂಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಸಿಸಿಕ್ಯಾಮೆರಾದಲ್ಲಿ ಅಪಘಾತದ ದೃಶ್ಯ ಸೆರೆಯಾಗಿದ್ದು ವೈರಲ್ ವಿಡಿಯೋ ಬೆಚ್ಚಿಬೀಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...