ಸ್ಕೂಟರ್ ಸವಾರನೊಬ್ಬ ರಸ್ತೆಯ ಗುಂಡಿಗೆ ಬಿದ್ದು ಟ್ರಕ್‌ಗೆ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ಸಂಭವಿಸಿದೆ. ಭೀಕರ ಘಟನೆಯ ಸಿಸಿ ಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದ್ವಿಚಕ್ರ ವಾಹನ ಸವಾರ ರಸ್ತೆ ಗುಂಡಿಯಲ್ಲಿ ಸಂಚರಿಸುತ್ತಿರಬೇಕಾದ್ರೆ ಎದುರಿಗೆ ಬಂದ ಟ್ರಕ್ ಗೆ ಗುಂಡಿಯಿಂದಾಗಿ ಬಿದ್ದು ಬಿಡುತ್ತಾನೆ. ಹೀಗಾಗಿ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಸ್ಥಳದಲ್ಲಿದ್ದವರು ಸವಾರನ ಸಹಾಯಕ್ಕೆ ಧಾವಿಸಿದರಾದ್ರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಗುಂಡಿಯಿಂದ ಯುವಕ ಮೃತಪಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ ಇಂತಹ ಘಟನೆ ಬೆಳಕಿಗೆ ಬರುತ್ತಿರುವುದು ಇದೇ ಮೊದಲಲ್ಲ. ಬೆಂಗಳೂರಿನಲ್ಲೂ ರಸ್ತೆಗುಂಡಿಯಿಂದ ದ್ವಿಚಕ್ರ ವಾಹನ ಸವಾರರು ಸಾವಿಗೀಡಾಗಿರುವ ಹಲವು ಪ್ರಕರಣಗಳಿವೆ. ಮಹಾರಾಷ್ಟ್ರ ರಾಜ್ಯ ಹೆದ್ದಾರಿ ಪೊಲೀಸರ ವರದಿಯು, 2018 ರಲ್ಲಿ ರಾಜ್ಯದಲ್ಲಿ 522 ರಸ್ತೆ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 166 ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು 343 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬಹಿರಂಗಪಡಿಸಿದೆ
ಮುಂದಿನ ಎರಡು ವರ್ಷಗಳಲ್ಲಿ ಮುಂಬೈ ಮತ್ತು ಅದರ ಉಪನಗರಗಳನ್ನು ಗುಂಡಿ ಮುಕ್ತ ಮಾಡುವ ಯೋಜನೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ. ದೇಶದ ವಾಣಿಜ್ಯ ನಗರಿಯಲ್ಲಿ ಸಂಪೂರ್ಣ ರಸ್ತೆ ಜಾಲವನ್ನು ವಿಶೇಷವಾಗಿ ಮಳೆಗಾಲದಲ್ಲಿ ಗುಂಡಿಗಳನ್ನು ತಪ್ಪಿಸಲು ಕಾಂಕ್ರೀಟೀಕರಣಗೊಳಿಸಲಾಗುವುದು ಎಂದು ಶಿಂಧೆ ತಿಳಿಸಿದ್ದಾರೆ.