ಮಂಡ್ಯ : ಮಂಡ್ಯದಲ್ಲಿ ಘೋರ ಘಟನೆ ಸಂಭವಿಸಿದ್ದು, ನಾಲೆಗೆ ಜೆಸಿಬಿ ಉರುಳಿ ಸ್ಥಳದಲ್ಲೇ ಚಾಲಕ ಮೃತಪಟ್ಟಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಗ್ರಾಮದ ಕೊಡಿಶೆಟ್ಟಿಪುರ ಬಳಿಯ ಜಕ್ಕನಹಳ್ಳಿ ರಸ್ತೆಯಲ್ಲಿ ಈ ಘಟನೆ ನಡೆದಿದೆ, ಮೃತರನ್ನು ತಮಿಳುನಾಡು ಮೂಲದ ಶಬರಿ (32) ಎಂದು ಗುರುತಿಸಲಾಗಿದೆ. ಇಂದು ಕಾಲುವೆ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಜೆಸಿಬಿ ನಾಲೆಗೆ ಇಳಿದು ಪಲ್ಟಿಯಾಗಿದೆ. ಪರಿಣಾಮ ಜೆಸಿಬಿ ಅಡಿ ಸಿಲುಕಿದ ಚಾಲಕ ಶಬರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಘಟನೆ ನಡೆದ ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.