ಹಾಸನ : ತುಂಡು ಬಟ್ಟೆ ಧರಿಸಿದ್ದಕ್ಕೆ ಪತಿಯೋರ್ವ ತನ್ನ ಪತ್ನಿಯನ್ನೇ ಬರ್ಬರವಾಗಿ ಕೊಂದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆತಾಲೂಕಿನರಾಂಪುರದಲ್ಲಿ ನಡೆದಿದೆ.
ಜೀವನ್ ಎಂಬಾತ ತನ್ನ ಪತ್ನಿ ಜ್ಯೋತಿಯನ್ನು ಕೊಂದು ಎಸ್ಕೇಪ್ ಆಗಿದ್ದಾನೆ. 1 ವರ್ಷದ ಹಿಂದೆ ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಪತ್ನಿ ಮಾರ್ಡನ್ ಡ್ರೆಸ್ ಧರಿಸಿದ್ದಕ್ಕೆ ರೊಚ್ಚಿಗೆದ್ದ ಪತಿ ಜೀವನ್ ಪತ್ನಿಯನ್ನು ಹೊರಗಡೆ ಕರೆದುಕೊಂಡು ಹೋಗಿ ಕತ್ತು ಕೊಯ್ದು ಬರ್ಬರವಾಗಿ ಕೊಂದಿದ್ದಾನೆ ಎಂದು ತಿಳಿದು ಬಂದಿದೆ.ಸದಾ ಮಾಡ್ರನ್ ಡ್ರೆಸ್ ಧರಿಸುತ್ತಿದ್ದ ಜ್ಯೋತಿ ಮೇಲೆ ಪತಿ ಜೀವನ್ ಕೋಪಗೊಂಡಿದ್ದನು. ಅಲ್ಲದೇ ಹಲವು ಬಾರಿ ಅನುಮಾನ ಪಟ್ಟು ಜಗಳವಾಡಿದ್ದನು.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಹೊಸ ವರ್ಷ ಆರಂಭದ ಹೊತ್ತಲ್ಲೇ ಈ ಘಟನೆ ನಡೆದಿದ್ದು, ಪತಿಯ ಕೃತ್ಯಕ್ಕೆ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.