ಗದಗ : ಗದಗದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಸಾಲಭಾದೆಯಿಂದ ಬೇಸತ್ತು 3 ಮಕ್ಕಳೊಂದಿಗೆ ನದಿಗೆ ಹಾರಿ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಇದೀಗ ನಾಲ್ವರ ಮೃತದೇಹಗಳನ್ನು ಅಗ್ನಿಶಾಮಕ ಸಿಬ್ಬಂದಿ ನದಿಯಿಂದ ಹೊರ ತೆಗೆದಿದ್ದಾರೆ. ಮೃತರನ್ನು ತಂದೆ ಮಂಜುನಾಥ ಅರಕೇರ (40) ಹಾಗೂ ಮಕ್ಕಳಾದ ವೇದಾಂತ್ (3) ಧನ್ಯ (6) ಪವನ್ (4) ಎಂದು ಗುರುತಿಸಲಾಗಿದೆ.
ಕೌಟುಂಬಿಕ ಕಲಹ, ಸಾಲಭಾದೆಯಿಂದ ಬೇಸತ್ತು ಮಕ್ತುಂಪುರ ಗ್ರಾಮದ ಮಂಜುನಾಥ್ ತನ್ನ ಹೆಂಡತಿಯ ಅಣ್ಣನ ಮಗ ವೇದಾಂತ್ ಸೇರಿದಂತೆ ಇಬ್ಬರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.