ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಡೇಟ್ ಮೇಲೆ ಹೊರಟ ಯುವತಿಯೊಬ್ಬರು ಈ ವೇಳೆ ಆತನೊಂದಿಗೆ ಲೈಂಗಿಕವಾಗಿ ಬೆಸೆಯಲು ನಿರಾಕರಿಸಿದ ಕಾರಣ ಆತನಿಂದ ಹಲ್ಲೆಗೊಳಗಾದ ಘಟನೆ ಮುಂಬೈನ ಬಾಂದ್ರಾದಲ್ಲಿ ಜರುಗಿದೆ.
ಆಕಾಶ್ ಮುಖರ್ಜಿ ಹಾಗೂ ಲುಬ್ನಾ ಸುಕ್ತೇ ಎಂಬ ಇಬ್ಬರು ಬಾಂದ್ರಾದ ಬ್ಯಾಂಡ್‌ಸ್ಟಾಂಡ್ ಪ್ರದೇಶದಲ್ಲಿ ಡೇಟ್ ಮಾಡುತ್ತಿದ್ದರು. ಈ ವೇಳೆ ತನ್ನೊಂದಿಗೆ ಸೆಕ್ಸ್ ಮಾಡಲು ಒಪ್ಪದ ಲುಬ್ನಾಳನ್ನು ಹಲ್ಲೆ ಮಾಡಿ ಕೊಲ್ಲಲು ಮುಂದಾಗಿದ್ದಾನೆ ಆಕಾಶ್. ಈ ಘಟನೆಯನ್ನು ಗಮನಿಸಿದ ದಾರಿಹೋಕರು ಈ ವಿಚಾರವನ್ನು ಪೊಲೀಸರಿಗೆ ಒಪ್ಪಿಸಿದ ಬಳಿಕ ಆಕಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಕ್ತೆ ಸದ್ಯ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಕಳೆದ 13 ತಿಂಗಳಿನಿಂದ ಇಬ್ಬರೂ ಸಂಬಂಧದಲ್ಲಿದ್ದು, ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದರು. ಬ್ಯಾಂಡ್ ಸ್ಟಾಂಡ್‌ಗೆ ಭೇಟಿ ನೀಡುವ ಮುನ್ನ ಇಬ್ಬರೂ ಗೇಟ್ ವೇ ಆಫ್ ಇಂಡಿಯಾಗೆ ಭೇಟಿ ಕೊಟ್ಟಿದ್ದರು.