ಅತಿಯಾದ ವೇಗ ಅನಾಹುತಕ್ಕೆ ಕಾರಣ ಅನ್ನೊ ಸತ್ಯ ಗೊತ್ತಿದ್ದರೂ ಕೆಲವರು ಅದನ್ನೇ ಮರತೇ ಬಿಟ್ಟಿರುತ್ತಾರೆ. ಜಮ್ಮು-ಕಾಶ್ಮೀರದ ರಾಜೋರಿಯ ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ ವಾಹನ ವೇಗವಾಗಿ ಓಡಿಸಿದರೆ ಏನಾಗಬಹುದು ಅನ್ನೋದಕ್ಕೆ ಸಾಕ್ಷಿಯಾಗಿದೆ.
ಈ ಘಟನೆಯಲ್ಲಿ ಏನಿಲ್ಲ ಅಂದರೂ ಇಬ್ಬರಿಗೆ ಗಂಭೀರ ರೂಪದ ಗಾಯಗಳಾಗಿವೆ. ದೃಶ್ಯದಲ್ಲಿ ಗಮನಿಸುವಂತೆ ರಸ್ತೆಯ ಪಕ್ಕದಲ್ಲಿ ಕಾರೊಂದನ್ನ ನಿಲ್ಲಿಸಲಾಗಿರುತ್ತೆ. ಅದೇ ರಸ್ತೆಯಲ್ಲಿ ಸಾಲು ಸಾಲಾಗಿ ವಾಹನಗಳು ಓಡಾಡೋದನ್ನ ಗಮನಿಸಬಹುದು.
ಅದೇ ವಾಹನಗಳ ಮಧ್ಯದಲ್ಲಿ ಕಾರೊಂದು ಅತಿ ವೇಗದಿಂದ ನುಗ್ಗಿ ಬಂದು ಅಲ್ಲೇ ನಿಂತಿದ್ದ ಕಾರಿಗೆ ಗುದ್ದಿ, ಮುಗುಚಿಕೊಂಡು ಉಲ್ಟಾ ಬಿದ್ದು ಬಿಡುತ್ತೆ. ಗಾಯಾಳುಗಳನ್ನ ಸದ್ಯಕ್ಕೆ ಅಲ್ಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ವಾಹನಗಳನ್ನ ವೇಗವಾಗಿ ಚಲಾಯಿಸುವುದರಿಂದಲೇ ಆಗುವ ಅಪಾಯ ಏನೇನು ಅನ್ನೋದನ್ನ ಆಗಾಗ ಮನವರಿಕೆ ಮಾಡಿಸುತ್ತಿದ್ದರೂ ವಾಹನ ಚಾಲಕರು ನಿರ್ಲಕ್ಷ್ಯ ತೋರಿಸುತ್ತಿರುವುದರಿಂದಲೇ ಈ ರೀತಿಯ ಅಪರಾಧಗಳು ನಡೆಯುತ್ತಿರುವುದು ವಿಪರ್ಯಾಸ.