ಸೂರತ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಏಳು ಕಾರ್ಮಿಕರು ಸಜೀವವಾಗಿ ದಹನವಾಗಿದ್ದು, 24 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ನಗರದ ಸಚಿನ್ ಕೈಗಾರಿಕಾ ಪ್ರದೇಶದಲ್ಲಿರುವ ಈಥರ್ ಇಂಡಸ್ಟ್ರೀಸ್ ಲಿಮಿಟೆಡ್ ನ ರಾಸಾಯನಿಕ ಉತ್ಪಾದನಾ ಘಟಕದಲ್ಲಿ ಶವವಾಗಿ ಪತ್ತೆಯಾದ ಏಳು ಜನರಲ್ಲಿ ಒಬ್ಬರು ಕಂಪನಿಯ ಉದ್ಯೋಗಿ ಮತ್ತು ಇತರ ಆರು ಮಂದಿ ಗುತ್ತಿಗೆ ಕಾರ್ಮಿಕರಾಗುದ್ದಾರೆ. ಮೃತರನ್ನು ದಿವ್ಯೇಶ್ ಪಟೇಲ್ (ಕಂಪನಿ ಉದ್ಯೋಗಿ), ಸಂತೋಷ್ ವಿಶ್ವಕರ್ಮ, ಸನತ್ ಕುಮಾರ್ ಮಿಶ್ರಾ, ಧರ್ಮೇಂದ್ರ ಕುಮಾರ್, ಗಣೇಶ್ ಪ್ರಸಾದ್, ಸುನಿಲ್ ಕುಮಾರ್ ಮತ್ತು ಅಭಿಷೇಕ್ ಸಿಂಗ್ ಎಂದು ಗುರುತಿಸಲಾಗಿದೆ.
“ಕಾರ್ಖಾನೆಯ ಆವರಣದಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಬುಧವಾರ ಸ್ಥಾವರವನ್ನು ಆವರಿಸಿದ ಬೆಂಕಿಯ ನಂತರ ಕಾಣೆಯಾದ ಏಳು ಕಾರ್ಮಿಕರ ಶವಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ” ಎಂದು ಅವರು ಹೇಳಿದರು.