ಬಾಗಲಕೋಟೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಚಾಲಕನ ದೇಹದೊಳಗೆ ಕಬ್ಬಿಣದ ರಾಡ್ ನುಗ್ಗಿ ಚಾಲಕ ನೋವಿನಿಂದ ಒದ್ದಾಡಿದ್ದಾನೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ 50 ರಲ್ಲಿ ನಡೆದಿದೆ. ಭೀಕರ ಅಪಘಾತದಲ್ಲಿ ಚಾಲಕ ಫೈಯದ್, ಕ್ಲೀನರ್ ಯಾಕೂ ಖಾನ್ ಗಾಯಗೊಂಡಿದ್ದಾರೆ. ಕಬ್ಬಿಣದ ರಾಡ್ ಸಾಗಿಸುತ್ತಿದ್ದ ಲಾರಿಗೆ ಕಾರೊಂದು ಅಡ್ಡ ಬಿದ್ದಿದೆ. ಇದನ್ನು ತಪ್ಪಿಸಲು ಚಾಲಕ ಸಡನ್ ಬ್ರೇಕ್ ಹಾಕಿದ್ದಾನೆ, ಪರಿಣಾಮ ಹಿಂಬದಿಯಲ್ಲಿ ತುಂಬಿದ್ದ ಕಬ್ಬಿಣದ ರಾಡ್ ಗಳು ಬ್ರೇಕ್ ಹಾಕುತ್ತಿದ್ದಂತೆ ಮುಂದಕ್ಕೆ ನುಗ್ಗಿದೆ. ರಾಡ್ ಗಳು ಚಾಲಕನ ದೇಹ ನುಗ್ಗಿದೆ.ಅಪಘಾತದಲ್ಲಿ ಚಾಲಕ ಹಾಗೂ ಕ್ಲೀನರ್ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.