ಮೇಷ : ಅವಿವೇಕಿಗಳ ಜೊತೆ ಅನಗತ್ಯ ವಾದ ಬೇಡ. ಕುಹಕ ಮಾತುಗಳಿಗೆ ತಲೆಕೆಡಿಸಿಕೊಳ್ಳದೇ ಖುಷಿಯಿಂದ ಮುನ್ನುಗ್ಗಿ. ಇಂದು ಅಗ್ನಿಯಿಂದ ಅಂತರ ಕಾಯ್ದುಕೊಳ್ಳಿ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ.
ವೃಷಭ : ನಿಮ್ಮ ವಿವೇಕಯುತ ನಡವಳಿಕೆಯು ಸಾರ್ವಜನಿಕ ಜೀವನದಲ್ಲಿ ಪ್ರಶಂಸೆಗೆ ಕಾರಣವಾಗಲಿದೆ. ಬಡವರಿಗೆ ಕೈಲಾದ ಸಹಾಯ ಮಾಡಿ. ಇದರಿಂದ ನಿಮಗೂ ಒಳ್ಳೆಯದಾಗಲಿದೆ. ನಿಮ್ಮಿಂದ ಲಾಭ ಪಡೆದವರೇ ನಿಮಗೆ ಬೆನ್ನ ಹಿಂದೆ ಚೂರಿ ಹಾಕಬಹುದು ಎಚ್ಚರವಿರಲಿ.
ಮಿಥುನ : ಸಂಗಾತಿಯ ಚುಚ್ಚು ಮಾತಿನಿಂದ ಮಾನಸಿಕವಾಗಿ ನೋವು ಅನುಭವಿಸಲಿದ್ದೀರಿ.ಆದಷ್ಟು ತಾಳ್ಮೆಯಿಂದಿರಿ. ಮಾನಸಿಕ ನೋವನ್ನು ಮರೆಯಲು ಸ್ನೇಹಿತರ ಜೊತೆ ಮಾತನಾಡಿ. ಕಚೇರಿ ಕೆಲಸದಲ್ಲಿ ನೆಮ್ಮದಿ ಇದೆ.
ಕಟಕ : ವಾಹನ ಚಲಾವಣೆ ಮಾಡುವಾಗ ಎಚ್ಚರಿಕೆಯಿಂದಿರಿ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಭಾದಿಸಲಿದೆ. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಮುನ್ನಡೆ ಕಾಯ್ದುಕೊಳ್ಳುವಿರಿ. ಸಹೋದ್ಯೋಗಿಗಳ ಜೊತೆ ಮಾತನಾಡುವಾಗ ಎಚ್ಚರಿಕೆ ಇರಲಿ.
ಸಿಂಹ : ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಹೀಗಾಗಿ ಬಿಡುವಿಲ್ಲದ ಕೆಲಸದಲ್ಲಿ ತೊಡಗಲಿದ್ದಿರಿ. ಸಂಗಾತಿಯು ನಿಮಗೆ ಉತ್ತಮ ಸಲಹೆ ನೀಡಲಿದ್ದಾರೆ. ನಿಮ್ಮೆಲ್ಲ ಕಷ್ಟಗಳಿಗೆ ಹೆಗಲು ನೀಡಲಿದ್ದಾರೆ. ಇದರಿಂದ ನೀವು ಸಂತೋಷಗೊಳ್ಳಲಿದ್ದೀರಿ.
ಕನ್ಯಾ: ಮಕ್ಕಳು ವಿದ್ಯಾಭ್ಯಾಸದತ್ತ ಕಡಿಮೆ ಗಮನ ನೀಡಲಿದ್ದಾರೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಲಿದೆ. ಈ ದಿನ ಹೆಚ್ಚಿನ ಆದ್ಯತೆಯನ್ನು ಕಚೇರಿ ಕೆಲಸಕ್ಕೆ ನೀಡಲಿದ್ದೀರಿ. ಉದ್ಯಮದಲ್ಲಿ ಲಾಭ ಸಿಗಲಿದೆ. ವೈದ್ಯಕೀಯ ವೃತ್ತಿಯವರು ಒತ್ತಡ ಅನುಭವಿಸಲಿದ್ದಾರೆ.
ತುಲಾ : ಯಾವುದೇ ಕಾಗದ ಪತ್ರಗಳಿಗೆ ಸಹಿ ಹಾಕುವ ಮುನ್ನ ನೂರು ಬಾರಿ ಯೋಚಿಸಿ. ಮೈ ಮರೆತು ಯಾವುದೇ ಕಾಗದ ಪತ್ರಗಳಿಗೆ ಸಹಿ ಹಾಕಬೇಡಿ. ಇಲ್ಲವಾದಲ್ಲಿ ಭಾರೀ ನಷ್ಟ ಅನುಭವಿಸಲಿದ್ದೀರಿ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡುವ ಸಾಧ್ಯತೆ ಇದೆ.
ವೃಶ್ಚಿಕ : ಮನೆಯಲ್ಲಿ ಮಗಳ ಮದುವೆಯ ಮಾತುಕತೆ ನಡೆಯಲಿದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡಲಿದ್ದೀರಿ. ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವೆ ಕಲಹ ಏರ್ಪಡುವ ಸಾಧ್ಯತೆ ಇದೆ. ದವಸ ಧಾನ್ಯಗಳ ಮಾರಾಟಗಾರರಿಗೆ ಲಾಭವಿದೆ.
ಧನು : ಸಂಬಂಧಿಗಳ ನಿವಾಸಕ್ಕೆ ಔತಣ ಕೂಟಕ್ಕೆ ತೆರಳಲಿದ್ದೀರಿ. ಹಿತಶತ್ರುಗಳ ಕಾಟ ತಪ್ಪಿದ್ದಲ್ಲ. ರಕ್ತದಾನ ಮಾಡಲಿದ್ದೀರಿ. ಪಿತ್ರಾರ್ಜಿತ ಆಸ್ತಿಯಲ್ಲಿ ಉತ್ತಮ ಪಾಲು ನಿಮ್ಮದಾಗಲಿದೆ. ಪೋಷಕರ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಮಕರ : ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಉದ್ಯೋಗಾಕಾಂಕ್ಷಿಗಳು ನಿಮ್ಮ ಪ್ರಯತ್ನ ಮುಂದುವರಿಸಿ. ಅಣ್ಣ – ತಮ್ಮಂದಿರ ನಡುವೆ ಇರುವ ಮನಸ್ತಾಪ ಮುಂದುವರಿಯಲಿದೆ. ಕುಟುಂಬದವರ ಜೊತೆ ಹೆಚ್ಚಿನ ಸಮಯ ಕಳೆಯಲಿದ್ದೀರಿ.
ಕುಂಭ : ಅಂದುಕೊಂಡಿದ್ದನ್ನು ಸಾಧಿಸಲೇಬೇಕು ಎಂಬ ಛಲವೇ ನಿಮ್ಮ ಯಶಸ್ಸಿನ ಗುಟ್ಟಾಗಿದೆ. ಉದ್ಯಮದಲ್ಲಿ ನಿಮ್ಮ ಗುರಿಯನ್ನು ತಲುಪಲಿದ್ದೀರಿ. ಇದೇ ಚೈತನ್ಯದ ಮೂಲಕ ಹೊಸ ಉದ್ಯಮಕ್ಕೆ ಕೈ ಹಾಕಲಿದ್ದೀರಿ. ಸಂಗಾತಿಯಿಂದ ಉತ್ತಮ ಸಲಹೆಗಳನ್ನು ನಿರೀಕ್ಷಿಸಬಹುದು.
ಮೀನ : ಗರ್ಭಿಣಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ರಾಜಕೀಯ ರಂಗದಲ್ಲಿ ಇರುವವರಿಗೆ ಅಹಂಕಾರಿ ಎಂಬ ಅಪವಾದ ಎದುರಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ. ಸರ್ಕಾರಿ ನೌಕರರಿಗೆ ಬಡ್ತಿ ಭಾಗ್ಯವಿದೆ.