ಮೇಷ : ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಅನವಶ್ಯಕ ವಸ್ತುಗಳನ್ನ ಖರೀದಿ ಮಾಡುವ ಬದಲು ಇರುವುದನ್ನೇ ಹೊಂದಿಸುವ ಅಭ್ಯಾಸ ರೂಢಿಸಿಕೊಳ್ಳಿ. ಮಕ್ಕಳಿಂದ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.
ವೃಷಭ : ನಿಧಾನಗತಿಯ ಪ್ರಗತಿಯಿಂದಾಗಿ ಮೇಲಾಧಿಕಾರಿಗಳು ನಿಮ್ಮ ಮೇಲೆ ಅಸಮಾಧಾನಗೊಳ್ಳಬಹುದು. ಹೀಗಾಗಿ ಕೆಲಸದಲ್ಲಿ ಇನ್ನಷ್ಟು ಶ್ರಮ ಹಾಕುವ ಅವಶ್ಯಕತೆ ತುಂಬಾನೇ ಇದೆ. ನೀವು ಸೌಂದರ್ಯ ಪ್ರಿಯರು. ಹೀಗಾಗಿ ಸೌಂದರ್ಯ ವಸ್ತುಗಳ ಖರೀದಿಗೆ ತುಂಬಾನೇ ಹಣ ವ್ಯಯ ಮಾಡುತ್ತಿದ್ದೀರಿ. ನಿಮ್ಮ ಸಂಗಾತಿಯೊಡನೆ ಉತ್ತಮ ಸಮಯ ಕಳೆಯುತ್ತೀರಿ.
ಮಿಥುನ : ನೀವು ಹಿಂದೊಮ್ಮೆ ಮಾಡಿದ ತಪ್ಪಿಗಾಗಿ ಇಂದು ಪಶ್ಚಾತಾಪ ಪಡುವ ಕಾಲ ಎದುರಾಗಲಿದೆ. ವಿದ್ಯಾರ್ಥಿಗಳು ಅತಿಯಾಗಿ ಮೊಬೈಲ್ ಬಳಕೆ ಮಾಡೋದನ್ನ ಬಿಟ್ಟು ಓದಿನ ಕಡೆ ಗಮನ ನೀಡಿದರೆ ಒಳಿತು. ದಾಂಪತ್ಯ ಜೀವನದಲ್ಲಿ ಬಿರುಕು ಮೂಡೋದ್ರಿಂದ ಏಕಾಂಗಿತನ ಅನುಭವಿಸಲಿದ್ದೀರಿ.
ಕಟಕ : ಮನೆಯಲ್ಲಿ ಶುಭ ಕಾರ್ಯ ನಡೆಯುವ ಮುನ್ಸೂಚನೆ ಸಿಗಲಿದೆ. ನಿಮ್ಮ ಪ್ರೀತಿ ಪಾತ್ರರು ನಿಮ್ಮನ್ನು ಸಂತೋಷವಾಗಿಡಲು ಯತ್ನಿಸುತ್ತಾರೆ. ಉದ್ಯಮದಲ್ಲಿ ನೀವು ಆರ್ಥಿಕ ಲಾಭ ಹೊಂದಲಿದ್ದೀರಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
ಸಿಂಹ : ಕಚೇರಿ ಕೆಲಸದಲ್ಲಿ ನಿಮ್ಮನ್ನ ಗುರುತಿಸಿಕೊಳ್ಳಲು ಇದೇ ಸರಿಯಾದ ಸಮಯವಾಗಿದೆ. ನಿಮ್ಮನ್ನ ಖುಷಿಯಾಗಿಡಲು ಸಂಗಾತಿ ಶ್ರದ್ಧೆಯಿಂದ ಯತ್ನಿಸುತ್ತಿದ್ದಾರೆ. ನಿಮಗೆ ಸಾಲದ ಹೊರೆ ಹೆಚ್ಚಾಗಲು ವಾಸ್ತು ದೋಷ ಕಾರಣವಾಗಿರಬಹುದು. ಹೀಗಾಗಿ ಈ ಬಗ್ಗೆ ಸ್ವಲ್ಪ ಯೋಚನೆ ಮಾಡಿ.
ಕನ್ಯಾ : ಹಣಕಾಸು ಯೋಜನೆಯೊಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಯಾವುದೇ ಉದ್ಯಮಕ್ಕೆ ಕೈ ಹಾಕುವ ಮುನ್ನ ನೂರು ಬಾರಿ ಯೋಚನೆ ಮಾಡುವುದು ಉತ್ತಮ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಹುಡುಕಿಕೊಂಡು ಬರಲಿದೆ.
ತುಲಾ : ನೀವು ಹಣವನ್ನು ನೀರಿನಂತೆ ಖರ್ಚು ಮಾಡುತ್ತೀರಿ. ಆದರೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿ ಇರೋದ್ರಿಂದ ನಿಮಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ. ಬಿಡುವಿನ ಸಮಯದಲ್ಲಿ ಯಾವುದಾದರೂ ಉದ್ಯಾನವನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ನಿರ್ಧಾರಕ್ಕೆ ಬರಲಿದ್ದೀರಿ.
ವೃಶ್ಚಿಕ : ಕುಟುಂಬಸ್ಥರ ಅಪಾರ ಪ್ರೀತಿ ಕಂಡು ಸಂತುಷ್ಟಗೊಳ್ಳಲಿದ್ದೀರಿ. ಯಾವುದೇ ಕೆಲಸ ಮಾಡುವ ಮುನ್ನ ಪೋಷಕರ ಸಲಹೆಯನ್ನು ಪಡೆಯಿರಿ. ಇದರಿಂದ ಒಳ್ಳೆಯದಾಗಲಿದೆ. ಸಂಗಾತಿ ನಿಮ್ಮೆಲ್ಲ ಪ್ರಯತ್ನಗಳಿಗೆ ಜೊತೆಯಾಗಿ ನಿಲ್ಲಲಿದ್ದಾರೆ. ಕಂಕಣ ಭಾಗ್ಯವಿದೆ.
ಧನು : ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯವ ಮುನ್ಸೂಚನೆ ಸಿಗಲಿದೆ. ಕಚೇರಿಯಲ್ಲಿ ಮೇಲಾಧಿಕಾರಿಗಳ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವಲ್ಲಿ ಸಫಲರಾಗುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಧನಲಾಭವಿದೆ.
ಮಕರ: ನಿಮ್ಮ ಬುದ್ಧಿಶಕ್ತಿಯನ್ನು ಅನಗತ್ಯ ವಿಚಾರಕ್ಕೆ ವ್ಯರ್ಥ ಮಾಡಬೇಡಿ. ಸರಿಯಾದ ಕಡೆ ಅದನ್ನು ಬಳಕೆ ಮಾಡಿ. ಇದರಿಂದ ನಿಮಗೆ ಲಾಭ ಸಿಗಲಿದೆ. ನಿಮ್ಮ ಅತಿಯಾದ ಸೌಂದರ್ಯ ವಿರುದ್ಧ ಲಿಂಗದವರನ್ನು ಆಕರ್ಷಿಸುತ್ತದೆ. ವಿದ್ಯಾರ್ಥಿಗಳು ಕಠಿಣ ಶ್ರಮದ ಮೂಲಕ ತಮಗೆ ಬೇಕಾಗಿದ್ದನ್ನು ಸಾಧಿಸಲಿದ್ದಾರೆ.
ಕುಂಭ : ವೈವಾಹಿಕ ಜೀವನದಿಂದ ಘಾಸಿಗೊಂಡಿರುವ ನೀವು ಅದನ್ನು ಮರೆಯಲು ಇನ್ನಿಲ್ಲದ ಸಂಕಟ ಪಡುವಿರಿ. ಆರ್ಥಿಕ ನಷ್ಟಕ್ಕೆ ದಾರಿಯಾಗುವಂತಹ ಖರ್ಚು ಬೇಡ. ಚಿಲ್ಲರೆ ವ್ಯಾಪಾರಿಗಳಿಗೆ ಇದು ಲಾಭಕರ ದಿನವಾಗಿದೆ. ಮಕ್ಕಳಿಂದ ಕಿರಿಕಿರಿ ಉಂಟಾಗಲಿದೆ.
ಮೀನ : ಕುಟುಂಬದಲ್ಲಿ ಟೀಕೆಗೆ ಒಳಗಾಗಲಿದ್ದೀರಿ. ಕುಟುಂಬದ ಕೆಲ ವಿಚಾರಗಳಿಗೆ ನೀವು ಹೊಂದಿಕೊಳ್ಳಲೇಬೇಕು. ದೂರದ ಪ್ರಯಾಣ ಕೈಗೊಳ್ಳುವ ಅವಕಾಶ ಕೂಡಿಬರಬಹುದು. ಅನಿರೀಕ್ಷಿತ ನಿಮ್ಮ ಕೈ ಸೇರಲಿದೆ. ಮನೆಯಲ್ಲಿ ವಾಸ್ತು ದೋಷವಿದೆ. ಅದನ್ನು ಸರಿ ಮಾಡುವ ಬಗ್ಗೆ ಗಂಭೀರ ಯೋಚನೆ ಮಾಡಲಿದ್ದೀರಿ.