ಮೇಷ : ಅನಗತ್ಯ ಖರ್ಚಿನಿಂದಾಗಿ ತಿಂಗಳ ಕೊನೆಯಲ್ಲಿ ಭಾರೀ ಕಷ್ಟ ಅನುಭವಿಸಲಿದ್ದೀರಿ. ಹೂಡಿಕೆ ಮಾಡುವ ವಿಚಾರದಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ಅನುಭವಸ್ಥರ ಬಳಿ ಸರಿಯಾಗಿ ಮಾತನಾಡಿ. ತತ್ಕ್ಷಣದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಹಿತಶತ್ರುಗಳ ಬಗ್ಗೆ ಎಚ್ಚರ ಇರಲಿ.
ವೃಷಭ : ಕಾಯಿಲೆಯಿಂದ ಬಳಲಲಿದ್ದೀರಿ. ಕಚೇರಿ ಕೆಲಸದ ಒತ್ತಡವು ನಿಮ್ಮನ್ನು ಇನ್ನಷ್ಟು ಕಾಡಲಿದೆ. ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಸಂಗಾತಿ ಸಲಹೆ ಪಡೆದುಕೊಳ್ಳಿ. ಪ್ರೇಮ ಜೀವನದಲ್ಲಿ ಬಿರುಕು ಮೂಡಬಹುದು. ಹೀಗಾಗಿ ತಾಳ್ಮೆಯಿಂದ ವರ್ತಿಸಿ.
ಮಿಥುನ: ಬಾಕಿ ಇರುವ ಕೆಲಸಗಳನ್ನು ಮುಗಿಸಿಕೊಳ್ಳಲಿದ್ದೀರಿ. ಸಂಗಾತಿಯಿಂದ ಉಡುಗೊರೆಯನ್ನು ಸ್ವೀಕರಿಸಲಿದ್ದೀರಿ. ಸ್ನೇಹಿತರೊಂದಿಗೆ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರೋದ್ರಿಂದ ನೆಮ್ಮದಿ ಎನಿಸಲಿದೆ.
ಕಟಕ : ಸಾರ್ವಜನಿಕ ಜೀವನದಲ್ಲಿ ನಿಮಗೆ ಪ್ರಶಂಸೆ ಸಿಗಲಿದೆ. ಸಂಗಾತಿಯೊಂದಿಗೆ ಆತ್ಮೀಯ ಕ್ಷಣಗಳನ್ನು ಕಳೆಯಲಿದ್ದೀರಿ. ಉದ್ಯೋಗಕ್ಕೆ ಅರಸುತ್ತಿರುವವರಿಗೆ ಇಂದು ಹೊಸ ಅವಕಾಶಗಳು ಕೂಡಿ ಬರಲಿದೆ. ಕಚೇರಿಯಲ್ಲಿ ನೀವು ಮಾತಿನ ಮೇಲೆ ಹಿಡಿತ ಸಾಧಿಸಲೇಬೇಕು.
ಸಿಂಹ : ನಿಮ್ಮ ಸೋಮಾರಿತನದಿಂದಾಗಿ ಉತ್ತಮ ಅವಕಾಶಗಳು ಕೈತಪ್ಪಿ ಹೋಗಲಿದೆ. ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿ. ಕೌಟುಂಬಿಕ ಜೀವನದಲ್ಲಿ ಕಲಹ ಏರ್ಪಡಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಮಕ್ಕಳ ತಪ್ಪು ಕೆಲಸಗಳು ನಿಮ್ಮ ಅಸಮಾಧಾನಕ್ಕೆ ಕಾರಣವಾಗಲಿದೆ.
ಕನ್ಯಾ : ಬೆಲೆಬಾಳುವ ವಸ್ತು ಖರೀದಿ ಮಾಡಲಿದ್ದೀರಿ. ಇಂದು ನಿಮಗೆ ತುಂಬಾನೇ ಆಯಾಸ ಎನಿಸಲಿದೆ. ಉದ್ಯಮವನ್ನು ವಿಸ್ತರಣೆ ಮಾಡುವ ಯೋಜನೆಯು ಇನ್ನಷ್ಟು ಬೆಳವಣಿಗೆ ಕಾಣಲಿದೆ. ತಾಯಿಯ ಆರೋಗ್ಯ ಹದಗೆಡೋದ್ರಿಂದ ನೆಮ್ಮದಿ ಕೆಡಲಿದೆ. ಸಂಗಾತಿ ಸೌಜನ್ಯದಿಂದ ವರ್ತಿಸಲಿದ್ದಾರೆ.
ತುಲಾ : ವೈವಾಹಿಕ ಸಂಬಂಧಕ್ಕೆ ಹುಡುಕಾಟ ನಡೆಸುತ್ತಿರುವವರಿಗೆ ಇಂದು ಕಂಕಣ ಭಾಗ್ಯ ಕೂಡಿಬರಲಿದೆ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಲಿದೆ. ವೈವಾಹಿಕ ಜೀವನದಲ್ಲಿ ಮನಸ್ತಾಪ ಉಂಟಾಗಲಿದೆ. ಆದಷ್ಟು ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿ. ದೂರ ಪ್ರಯಾಣ ಶುಭಕರವಲ್ಲ.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಮೇಲಾಧಿಕಾರಿಗಳು ಅನಗತ್ಯ ಕಾರಣಕ್ಕೆ ನಿಮ್ಮ ಮೇಲೆ ಸಿಟ್ಟಾಗಬಹುದು. ಆಸ್ತಿ ವಿಚಾರದಲ್ಲಿ ಮನೆಯ ಸೊಸೆ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಬಹುದು. ಇದು ಮನೆಯಲ್ಲಿ ಅಶಾಂತಿಗೆ ಕಾರಣವಾಗಲಿದೆ.
ಧನು : ಚಿಕ್ಕ ಚಿಕ್ಕ ವಿಚಾರಕ್ಕೂ ಕೋಪ ಮಾಡಿಕೊಳ್ತಿದ್ದೀರಿ. ಇದು ನಿಜಕ್ಕೂ ಒಳ್ಳೆಯದಲ್ಲ. ವಾರಾಂತ್ಯದಲ್ಲಿ ದೂರದ ಸ್ನೇಹಿತರನ್ನು ಭೇಟಿ ಮಾಡುತ್ತೀರಿ. ಉದ್ಯಮದಲ್ಲಿ ಅಪೇಕ್ಷಿತ ಲಾಭ ಸಿಗಲಿದೆ. ಹಳೆಯ ಕಾಯಿಲೆಗಳು ಮರುಜೀವ ಪಡೆಯಬಹುದು. ಹುಷಾರಾಗಿರಿ.
ಮಕರ : ಗುರಿಯಲ್ಲಿ ವಿಚಲತೆ ಬೇಡ. ಚಂಚಲ ಬುದ್ಧಿ ಅಂದುಕೊಂಡ ಕಾರ್ಯವನ್ನು ಪೂರ್ಣಗೊಳಿಸಲು ಬಿಡದು. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿ. ನಿಮ್ಮ ಪ್ರತಿಭೆಗೆ ತಕ್ಕ ಪ್ರಶಂಸೆ ಸಿಗಲಿದೆ. ಕೃಷಿಕರಿಗೆ ಲಾಭವಿದೆ. ಐಷಾರಾಮಿ ಜೀವನವು ಆರ್ಥಿಕ ಹೊರೆ ತಂದೀತು.
ಕುಂಭ : ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅತಿಯಾದ ನಿರ್ಲಕ್ಷ್ಯ ಬೇಡ. ಉದ್ಯಮದಲ್ಲಿ ಎಂದಿನಂತೆ ಸುಧಾರಣೆ ಇದೆ. ಪೋಷಕರ ಅನಾರೋಗ್ಯದ ಸಮಸ್ಯೆ ಕೊಂಚ ಒತ್ತಡ ತಂದೀತು. ಪತ್ನಿ ನಿಮ್ಮೆಲ್ಲ ಜವಾಬ್ದಾರಿಗೆ ಹೆಗಲಾಗಲಿದ್ದಾರೆ.
ಮೀನ : ಈ ದಿನವನ್ನು ನೀವು ಸಂತಸದಿಂದ ಕಳೆಯಲಿದ್ದೀರಿ. ಆದರೆ ಯಾವುದೇ ಕಾರಣಕ್ಕೂ ಬೆಂಕಿಯ ಜೊತೆ ಚೆಲ್ಲಾಟ ಬೇಡವೇ ಬೇಡ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯುವ ಮುನ್ಸೂಚನೆ ಸಿಗಲಿದೆ. ನಿಮ್ಮ ಯಶಸ್ಸು ಪೋಷಕರಿಗೆ ಗೌರವ ತರಲಿದೆ. ಹಣವನ್ನು ಯೋಚನೆಯಿಂದ ವಿನಿಯೋಗ ಮಾಡಿ.