alex Certify ಈ ರಾಶಿಯವರಿಗೆ ಇರಲಿ ಇಂದು ʼಆರೋಗ್ಯʼದ ಬಗ್ಗೆ ಕಾಳಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇರಲಿ ಇಂದು ʼಆರೋಗ್ಯʼದ ಬಗ್ಗೆ ಕಾಳಜಿ

ಮೇಷ : ಇಂದು ನಿಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. ಕುಟುಂಬಸ್ಥರೊಂದಿಗೆ ಉತ್ತಮ ಸಂಬಂಧ ಹೊಂದಿರಲಿದ್ದೀರಿ. ಸಂಗಾತಿಯೊಡನೆ ಉತ್ತಮ ಸ್ಥಳಕ್ಕೆ ಪ್ರವಾಸಕ್ಕೆ ತೆರಳಲಿದ್ದೀರಿ. ಕೆಂಪು ಬಣ್ಣದ ವಸ್ತ್ರವನ್ನು ದಾನ ಮಾಡಿ.

ವೃಷಭ : ದಾಂಪತ್ಯ ಜೀವನದಲ್ಲಿ ವೈಮನಸ್ಯ ಉಂಟಾಗಲಿದೆ. ಇದು ನಿಮ್ಮ ನೆಮ್ಮದಿಯನ್ನು ಹಾಳು ಮಾಡಬಹುದು. ನಿಮ್ಮೆಲ್ಲ ಹೊಸ ಪ್ರಯತ್ನಗಳಿಗೆ ಕುಟುಂಬಸ್ಥರು ಸಾಥ್​​ ನೀಡಲಿದ್ದಾರೆ.

ಮಿಥುನ : ಕಚೇರಿ ಕೆಲಸದಲ್ಲಿ ಪ್ರಗತಿ ಕಾಣುತ್ತಿದ್ದೀರಿ. ಕುಟುಂಬಸ್ಥರ ಜೊತೆ ತೀರ್ಥಸ್ಥಾನಗಳಿಗೆ ಭೇಟಿ ನೀಡಲಿದ್ದೀರಿ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಪೋಷಕರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಕಟಕ: ತಂದೆಗೆ ಅನಿರೀಕ್ಷಿತ ಮೂಲದಿಂದ ಆದಾಯ ಸಿಗಲಿದೆ. ಇದರಿಂದ ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಉದ್ಯಮದಲ್ಲಿ ಪ್ರಗತಿ ಕಾಣುತ್ತೀರಿ. ನಿಮ್ಮ ಏಳ್ಗೆಯಿಂದ ಕುಟುಂಬಸ್ಥರು ತೃಪ್ತರಾಗಲಿದ್ದಾರೆ. ಸಂಗಾತಿಯಿಂದ ಉತ್ತಮ ಸಲಹೆ ಸ್ವೀಕರಿಸಲಿದ್ದೀರಿ.

ಸಿಂಹ : ಕಚೇರಿ ಮೇಲಾಧಿಕಾರಿಗಳು ನಿಮ್ಮ ಕೆಲಸದಿಂದ ಸಂತುಷ್ಟರಾಗಲಿದ್ದಾರೆ. ಶಿವನನ್ನು ಧ್ಯಾನಿಸೋದ್ರಿಂದ ಎಲ್ಲವೂ ಒಳಿತಾಗಲಿದೆ. ನಿಮ್ಮ ಅತಿಯಾದ ಶಿಸ್ತು ಸಂಗಾತಿಗೆ ಕಿರಿಕಿರಿ ಎನಿಸಬಹುದು. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ.

ಕನ್ಯಾ : ಸಾರ್ವಜನಿಕ ಜೀವನದಲ್ಲಿ ಮಾನಹಾನಿ ಆಗುವ ಸಾಧ್ಯತೆ ಇದೆ. ಇದರಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಲಿದ್ದಾರೆ. ಮಾತಿನ ಮೇಲಿನ ಹಿಡಿತ ಕಳೆದುಕೊಳ್ಳಬೇಡಿ. ಕುಲದೇವರನ್ನು ಆರಾಧಿಸಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ತುಲಾ : ಆಧ್ಯಾತ್ಮಿಕತೆಯತ್ತ ಮನಸ್ಸು ವಾಲಲಿದೆ. ಲೌಕಿಕ ಜೀವನದಿಂದ ಮುಕ್ತಿ ಹೊಂದುವ ಬಗ್ಗೆ ಯೋಚಿಸಲಿದ್ದೀರಿ. ಮನೆಯ ಕಿರಿಯ ಸದಸ್ಯರಿಂದ ಶುಭಸುದ್ದಿ ಕೇಳಲಿದ್ದೀರಿ. ಆರೋಗ್ಯ ಕೆಡುವ ಸಾಧ್ಯತೆ ಇರೋದ್ರಿಂದ ಹೊರಗಿನ ಆಹಾರ ಸೇವನೆ ಮಾಡಬೇಡಿ.

ವೃಶ್ಚಿಕ : ಮಿತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಪ್ರವಾಸ ಕೈಗೊಳ್ಳುವ ಬಗ್ಗೆಯೂ ಮಾತುಕತೆ ನಡೆಯಲಿದೆ. ಖರ್ಚು ವೆಚ್ಚದ ವಿಚಾರದಲ್ಲಿ ಹಿಡಿತ ಸಾಧಿಸಲೇಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತು ತಲೆಯಲ್ಲಿರಲಿ.

ಧನು : ನೀವು ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಉದ್ಯಮದಲ್ಲಿ ಲಾಭ ನಿಮ್ಮದಾಗಲಿದೆ. ಆದಾಯ ಕೂಡ ಹೆಚ್ಚಾಗಲಿದೆ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇದೆ. ಮಕ್ಕಳ ಸಾಧನೆ ಖುಷಿ ನೀಡಲಿದೆ. ವೈವಾಹಿಕ ಸಂಬಂಧ ಕೂಡಿ ಬರಲಿದೆ.

ಮಕರ : ನೀವು ಬಹಳ ದಿನದಿಂದ ಕನಸು ಕಾಣುತ್ತಿದ್ದ ಕೆಲಸವು ನಿಮಗೆ ದಕ್ಕಲಿದೆ. ಸರ್ಕಾರಿ ಅಧಿಕಾರಿಗಳಿಗೆ ದಿಢೀರ್​ ವರ್ಗಾವಣೆ ಸಾಧ್ಯತೆ ಇದೆ. ಮನೆಯಲ್ಲಿ ವಾಸ್ತು ಪೂಜೆ ಮಾಡುವ ಪ್ರಸಂಗ ಎದುರಾಗಬಹುದು. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ.

ಕುಂಭ : ಹೊರಗಿನ ಒತ್ತಡಗಳನ್ನು ಮನೆಯವರ ಮೇಲೆ ತೀರಿಸಲು ಹೋಗಬೇಡಿ. ಇದರಿಂದ ಅವರಿಗೂ ಕಿರಿಕಿರಿ ಉಂಟಾಗಲಿದೆ. ಮೇಲಾಗಿ ಮನೆಯ ನೆಮ್ಮದಿ ಕೂಡ ಕೆಡಲಿದೆ. ಶೀತ, ಜ್ವರದಂತಹ ಸಮಸ್ಯೆ ನಿಮ್ಮನ್ನು ಕಾಡಬಹುದು. ಹೀಗಾಗಿ ಎಚ್ಚರಿಕೆ ಇರಲಿ. ವೈವಾಹಿಕ ಜೀವನದಲ್ಲಿ ಪರಿಸ್ಥಿತಿ ನಿಮ್ಮ ಪರವಾಗಿ ಇರಲಿದೆ.

ಮೀನ : ಅತಿಯಾದ ಕೋಪ ನಿಮಗೆ ಅನೇಕರ ಜೊತೆಗಿನ ಬಂಧವನ್ನು ಕಡಿದು ಹಾಕಲಿದೆ. ಮಾಡಿದ ತಪ್ಪನ್ನು ಒಪ್ಪಿಕೊಳ್ಳಿ. ಅದನ್ನು ಬಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸಬೇಡಿ. ಕಳೆದು ಹೋಗಿದ್ದರ ಬಗ್ಗೆ ಅತಿಯಾದ ಚಿಂತೆ ಬೇಡ. ಈ ಕ್ಷಣ ನಿಮ್ಮದು ಹಾಗೆ ಬದುಕಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Chytré triky pro vaši kuchyni, zahradu a život: objevte naše nejlepší tipy a triky pro vaši každodenní rutinu. Uvařte si lahodné pokrmy a pěstujte si zeleninu jako profesionálové. Naše užitečné články vám pomohou vytvořit skvělý životní styl. Najít kočku: vrcholový test pozornosti на Kde se skrývá autíčko: jen Vynikající jemné bramborové placky s Jak najít Tajemná výzva: pouze 2 % lidí Pikantní krabí salát s fazolemi: lahodný recept na Vyzkoušejte to, jen géniusové: Proč je IQ test se optickým klamem: Najděte Top 10 potravin pro dlouhověkost: Co Získat nejnovější lifestylové tipy, kuchařské triky a užitečné články o zahradničení na našem webu! Najdete zde spoustu inspirace pro vylepšení svého každodenního života a získání nových dovedností. Buďte součástí naší komunity a objevujte společně s námi radost z jednoduchých, ale efektivních triků pro pohodlnější a zdravější život!