ಋತುಚಕ್ರದ ಅವಧಿ ಅನ್ನೋದು ಪ್ರತಿ ತಿಂಗಳು ಮಹಿಳೆ ಎದುರಿಸುವ ಕಠಿಣ ದಿನವಾಗಿದೆ. ದೈಹಿಕವಾಗಿ ನೋವು ಒಂದೆಡೆಯಾದರೆ ಮಾನಸಿಕವಾಗಿಯೂ ನೆಮ್ಮದಿ ಇರೋದಿಲ್ಲ. ಆದರೆ ಕೆಲವರಿಗೆ ಮುಟ್ಟಿನ ಸಂದರ್ಭದಲ್ಲಿಯೂ ಸೆಕ್ಸ್ ಮಾಡುವ ಅಭ್ಯಾಸ ಇರುತ್ತೆ. ಹಾಗಾದರೆ ಇದು ಒಳ್ಳೆಯದೇ..? ಒಂದು ವೇಳೆ ಈ ಸಂದರ್ಭದಲ್ಲಿ ಸೆಕ್ಸ್ ಮಾಡಿದಲ್ಲಿ ನೀವು ಎಚ್ಚರ ವಹಿಸಬೇಕಾದ ಅಂಶಗಳು ಯಾವುವು ಅನ್ನೋದಕ್ಕೆ ಇಲ್ಲಿದೆ ಮಾಹಿತಿ.
ಮುಟ್ಟಿನ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಮಾಡಲೇಬಾರದು ಎಂದೇನಲ್ಲ. ಆದರೆ ಈ ಸಂದರ್ಭದಲ್ಲಿ ಸೋಂಕು ಹರಡುವ ಸಾಧ್ಯತೆ ಇರೋದ್ರಿಂದ ಕೊಂಚ ಎಚ್ಚರಿಕೆಯಿಂದ ಇರೋದು ತುಂಬಾನೆ ಅಗತ್ಯವಾಗಿದೆ. ಅಲ್ಲದೇ ಈ ಸಂದರ್ಭದಲ್ಲಿ ಸೆಕ್ಸ್ ಮಾಡೋದ್ರಿಂದ ಋತುಚಕ್ರದಿಂದ ದೇಹದಲ್ಲಿ ಆಗುತ್ತಿದ್ದ ನೋವು ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ಕೂಡ ಇದೆ.
ತಿಂಗಳ ಮುಟ್ಟಿನ ಸಂದರ್ಭದಲ್ಲಿ ಹಾರ್ಮೋನ್ಗಳು ಏರುಪೇರು ಆಗೋದ್ರಿಂದ ಮಾನಸಿಕವಾಗಿ ನೀವು ಒತ್ತಡಕ್ಕೆ ಒಳಗಾಗುತ್ತೀರಿ. ಇಂತಹ ಸಮಯದಲ್ಲಿ ಲೈಂಗಿಕ ಕ್ರಿಯೆ ಅನೇಕ ಮಹಿಳೆಯರಿಗೆ ಸ್ಟ್ರೆಸ್ ಬಸ್ಟರ್ ಆಗಿ ಬದಲಾಗಬಹುದು. ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಎಂಡಾರ್ಫಿನ್ ಬಿಡುಗಡೆಯಾಗೋದ್ರಿಂದ ಮಹಿಳೆಯರಿಗೆ ನಿರಾಳ ಎನಿಸಲಿದೆ.
ಆದರೆ ಸಾಮಾನ್ಯ ದಿನದಂತೆ ಮುಟ್ಟಿನ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಅಷ್ಟೊಂದು ಸುಲಭವಾಗಿ ಇರೋದಿಲ್ಲ. ಹಾಸಿಗೆಯೆಲ್ಲ ರಕ್ತವಾಗಿಬಿಡಬಹುದು. ಹೀಗಾಗಿ ನೀವು ಕೊಂಚ ಕಾಳಜಿ ವಹಿಸಬೇಕು. ರಕ್ತಸ್ರಾವ ಕಡಿಮೆ ಇರುವ ದಿನಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರೆ ಇನ್ನಷ್ಟು ಒಳ್ಳೆಯದು. ಪ್ಯಾಡ್ಗಳ ಬದಲು ಮೆನ್ಯೂಸ್ಟ್ರಲ್ ಕಪ್ ಇಲ್ಲವೇ ಮಹಿಳಾ ಕಾಂಡೋಮ್ಗಳು ಹಾಸಿಗೆಯ ಮೇಲೆಲ್ಲ ರಕ್ತವಾಗೋದನ್ನ ತಪ್ಪಿಸಲು ಸಹಾಯಕಾರಿ. ಆದರೆ ಲೈಂಗಿಕ ಕ್ರಿಯೆ ಬಳಿಕ ಖಾಸಗಿ ಅಂಗಾಗಳನ್ನ ಆಗಿಂದಾಗಲೇ ಸ್ವಚ್ಛ ಮಾಡಿಕೊಂಡಲ್ಲಿ ಸೋಂಕಿನ ಅಪಾಯ ಇರೋದಿಲ್ಲ.