ರಾಣಿ ಎಲಿಜಬೆತ್ II ಬ್ರಿಟನ್ನ ದೀರ್ಘಾಯುಷ್ಯ ಹೊಂದಿದ ಹಾಗೂ ದೀರ್ಘಾವದಿಯ ರಾಣಿಯಾಗಿದ್ದಾರೆ. ಹಾಗಂತ ನೀವು ಆಕೆಯನ್ನು ವೃದ್ಧೆ ಎಂದು ಕರೆಯುವಂತಿಲ್ಲ..!
95 ವರ್ಷದ ಈ ಬ್ರಿಟಿಷ್ ರಾಣಿ ನಿಯತಕಾಲಿಕೆಯೊಂದು ನೀಡಿದ್ದ ‘ವರ್ಷದ ವೃದ್ಧೆ’ ಎಂಬ ಗೌರವವನ್ನು ನಯವಾಗಿ ನಿರಾಕರಿಸಿದ್ದಾರೆ. ಈ ಗೌರವಕ್ಕೆ ಸೂಕ್ತವಾದ ಗುಣಗಳು ನನ್ನಲ್ಲಿ ಇಲ್ಲ ಎಂದು ಹೇಳುವ ಮೂಲಕ ಇದನ್ನು ತಿರಸ್ಕರಿಸಿದ್ದಾರೆ.
ನೀವು ಭಾವಿಸಿದಷ್ಟು ನಿಮಗೆ ವಯಸ್ಸಾಗುತ್ತೆ ಎಂದು ಅವರು ನಂಬಿದ್ದಾರೆ. ಈ ಗೌರವಕ್ಕೆ ಸೂಕ್ತವಾದ ಮಾನದಂಡಗಳನ್ನು ನಾವು ಪೂರೈಸುತ್ತೇವೆ ಎಂದು ರಾಣಿಯು ನಂಬಿಕೆ ಹೊಂದಿಲ್ಲ. ಹೀಗಾಗಿ ಇದಕ್ಕೆ ಅರ್ಹರಾದ ಮಾನದಂಡಗಳನ್ನು ಹೊಂದಿರುವವರನ್ನು ನೀವು ಕಂಡುಕೊಳ್ಳುತ್ತೀರಿ ಎಂದು ಎಲಿಜಬೆತ್ ಆಶಿಸುತ್ತಾರೆ ಎಂದು ಎರಡನೇ ಎಲಿಜಬೆತ್ರ ಖಾಸಗಿ ಕಾರ್ಯದರ್ಶಿ ಪತ್ರವೊಂದರ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ರಾಣಿ 2ನೇ ಎಲಿಜಬೆತ್ ಈ ವರ್ಷವಷ್ಟೇ ಪತಿಯನ್ನು ಕಳೆದುಕೊಂಡಿದ್ದಾರೆ. ಆದರೂ ತಮ್ಮ ರಾಜವಂಶಸ್ಥ ಕರ್ತವ್ಯಗಳೆಲ್ಲವನ್ನೂ ಈ ಇಳಿವಯಸ್ಸಿನಲ್ಲೂ ನಿಭಾಯಿಸುತ್ತಿದ್ದಾರೆ.