
ಉತ್ತರ ಪ್ರದೇಶದ ಸೀತಾಪುರದಲ್ಲಿ ಅನ್ಯ ಜಾತಿಯ ಹುಡುಗನನ್ನು ಮದುವೆಯಾಗಿದ್ದ ಯುವತಿಯನ್ನು ಆಕೆಯ ಸೋದರ ಮಾವನೇ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಪಿಸಾವನ್ ಪೊಲೀಸ್ ಸರ್ಕಲ್ ವ್ಯಾಪ್ತಿಯ ಬಜನಗರ ಗ್ರಾಮದಲ್ಲಿ ಘಟನೆ ನಡೆದಿದೆ. ಸೀತಾಪುರ ಹೆಚ್ಚುವರಿ ಪೊಲೀಸ ಅಧ್ಯಕ್ಷ ಎನ್.ಪಿ. ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, 20 ವರ್ಷದ ಯುವತಿ ಬಜನಗರ ಗ್ರಾಮದ ರೂಪಚಂದ್ರ ಮೌರ್ಯ ಎಂಬುವನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಆಕೆಯ ಸೋದರ ಮಾವ ಆಕೆಯ ತಂದೆ ಕೆಲಸ ಮಾಡುತ್ತಿದ್ದ ಗಾಜಿಯಾಬಾದ್ ಗೆ ಯುವತಿಯನ್ನು ಕಳುಹಿಸಿದ್ದ. ಕೆಲವು ತಿಂಗಳ ಹಿಂದೆ ರೂಪಚಂದ್ರ ಮೌರ್ಯ ಗಾಜಿಯಾಬಾದ್ ಗೆ ಹೋಗಿದ್ದು, ಯುವತಿಯ ಕರೆದುಕೊಂಡು ಹೋಗಿ ಕಳೆದ ವರ್ಷ ನವೆಂಬರ್ ನಲ್ಲಿ ನ್ಯಾಯಾಲಯದಲ್ಲಿ ಮದುವೆಯಾಗಿದ್ದರು. ಕೆಲ ದಿನಗಳ ನಂತರ ಅವರು ಗ್ರಾಮಕ್ಕೆ ಮರಳಿದ್ದರು. ಈ ವಿಷಯ ತಿಳಿದ ಸೋದರಮಾವ ಶ್ಯಾಮು ಸಿಂಗ್ ಶನಿವಾರ ಅವರ ಮನೆಗೆ ತೆರಳಿ ಯುವತಿಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಕುಡುಗೋಲಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.
ಮರ್ಯಾದಾ ಹತ್ಯೆ ನಂತರ ಆರೋಪಿ ಪಿಸಾವನ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.