ಕರ್ನಾಟಕದಲ್ಲಿ ಐತಿಹಾಸಿಕ, ಚಾರಣ ಪ್ರಿಯರಿಗೆ, ಧಾರ್ಮಿಕ ಕ್ಷೇತ್ರಗಳನ್ನ ಇಷ್ಟ ಪಡುವವರಿಗೆ, ಕಡಲ ತೀರ ಪ್ರಿಯರಿಗೆ ಹೀಗೆ ಎಲ್ಲರಿಗೂ ಹಿತವೆನಿಸುವ ಸ್ಥಳಗಳಿವೆ. ಇದರಲ್ಲಿ ಚಾರಣ ವಿಭಾಗವನ್ನ ಆಯ್ಕೆ ಮಾಡಿಕೊಳ್ಳುವ ಪೈಕಿ ನೀವಾಗಿದ್ದರೆ ಶಿವಮೊಗ್ಗ ಜಿಲ್ಲೆಯ ಹೊನ್ನೆಮರಡು ನಿಮ್ಮ ಪಾಲಿಗೆ ಉತ್ತಮ ಆಯ್ಕೆ ಎನಿಸಬಹುದು.
ಹೊನ್ನೇಮರಡು ಜಲಾಶಯದ ಸಮೀಪದಲ್ಲೇ ಇರುವ ಹೊನ್ನೇಮರಡು ಗ್ರಾಮ ಶರಾವತಿ ಹಿನ್ನೀರಿನ ಪ್ರದೇಶವಾಗಿದೆ. ಹೊನ್ನೆ ಮರ ಎಂಬ ಶಬ್ದದಿಂದ ಈ ಗ್ರಾಮಕ್ಕೆ ಹೊನ್ನೇಮರಡು ಹೆಸರು ಬಂದಿದೆ.
ಹೊನ್ನೇಮರಡು ಒಂದು ಗ್ರಾಮ ಎನ್ನೋದಕ್ಕಿಂತ ಹೆಚ್ಚಾಗಿ ದ್ವೀಪವೆನ್ನಲೂಬಹುದು. ದೊಡ್ಡ ಅರಣ್ಯ ಪ್ರದೇಶದ ನಡುವೆ ಇರುವ ಈ ದ್ವೀಪಕ್ಕೆ ನೀವು ತೆಪ್ಪದ ಮೂಲಕ ಅಥವಾ ಈಜುವ ಮೂಲಕ ಇಲ್ಲವಾದಲ್ಲಿ ಚಾರಣ ಮಾಡುವ ಮೂಲಕ ಎಂಟ್ರಿ ಕೊಡಬಹುದು.
ಹೊನ್ನೇಮರಡು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ನೀವು ಇದೇ ಜಿಲ್ಲೆಯಲ್ಲಿರುವ ಜೋಗ ಜಲಪಾತ ಹಾಗೂ ದಬ್ಬೆ ಫಾಲ್ಸ್ಗೂ ಭೇಟಿ ನೀಡಬಹುದು. ಶಿವಮೊಗ್ಗದಿಂದ ಈ ಹತ್ತಿರ ಇರೋದ್ರಿಂದ ನೀವು ಬಸ್ ಇಲ್ಲವೇ ಖಾಸಗಿ ವಾಹನಗಳ ಮೂಲಕ ಈ ಪ್ರವಾಸಿ ತಾಣಕ್ಕೆ ಭೇಟಿ ನೀಡಬಹುದಾಗಿದೆ.