
ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಸೋಗಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉಲ್ಲಾಳ ಉಪನಗರ ವಿಶ್ವೇಶ್ವರಯ್ಯ ಲೇಔಟ್ 29 ವರ್ಷದ ಮಹಿಳೆ ಮತ್ತು ಆಕೆಯ ಪತಿ 33 ವರ್ಷದ ಕಿರಣ್ ರಾಜ್ ಅವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.
ಲೈಂಗಿಕ ಕ್ರಿಯೆಗೆ ಯುವಕನನ್ನು ಆಹ್ವಾನಿಸಿದ್ದು, ಮನೆಯ ಬಳಿ ಮನೆಗೆ ಬಂದ ಆತನಿಗೆ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ ಆರೋಪಿಗಳು ಹಣಕ್ಕಾಗಿ ಬೆದರಿಸಿದ್ದರು. ಯುವಕ ವೈಟ್ಫೀಲ್ಡ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿದ್ದಾರೆ.
ನಾಗಮಂಗಲದ ಕಿರಣ್ ರಾಜ್ ಹಾಗೂ ಆತನ ಪತ್ನಿ 2018 ರಲ್ಲಿ ಮದುವೆಯಾಗಿದ್ದು, ಹಣ ಸಂಪಾದನೆಗೆ ವೇಶ್ಯಾವಾಟಿಕೆ ಹೆಸರಲ್ಲಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದ್ದರು. ಎರಡು ವರ್ಷಗಳಿಂದ ಹಲವರನ್ನು ಬಲೆಗೆ ಬೀಳಿಸಿಕೊಂಡು, ಅವರ ಫೋನ್, ವಿಳಾಸ ಹಣ ಪಡೆದ ಮಾಹಿತಿಯನ್ನು ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದ ದಂಪತಿ ಆಗಾಗ ಬೆದರಿಸಿ ಹಣ ಕೀಳುತ್ತಿದ್ದರು ಎನ್ನಲಾಗಿದೆ.