
ನವದೆಹಲಿ: ರಾಜಕಾರಣಿಗಳು ಹಾಗೂ ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ರಾಜಕೀಯ ನಾಯಕರು, ನ್ಯಾಯಾಧೀಶರ ಮೇಲೆ ಹನಿಟ್ರ್ಯಾಪ್ ಕೇಸ್ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಇದೇ ವೇಳೆ ವಕೀಲ ವಿನಯ್ ಕುಮಾರ್ ಸಿಂಗ್ ಎಂಬುವವರು ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದರು. ಅರ್ಜಿ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್, ನೀವು ಜಾರ್ಖಂಡ್ ನವರು ಇದಕ್ಕೂ ನಿಮಗೂ ಏನು ಸಬಂಧ ಎಂದು ಪ್ರಶ್ನಿಸಿದೆ.
ರಾಜಕೀಯ ನಾಟಕಗಳನ್ನೆಲ್ಲ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಅಲ್ಲದೇ ನ್ಯಾಯಾಧೀಶರು ಯಾಕೆ ಹನಿಟ್ರ್ಯಾಪ್ ಗೆ ಒಳಗಾಗುತ್ತಾರೆ? ಅದನ್ನು ಅವರು ನೋಡಿಕೊಳ್ಳುತ್ತಾರೆ. ಇಂತಹ ಅರ್ಜಿ ವಿಚಾರಣೆ ನಡೆಸಲು ಆಗಲ್ಲ ಎಂದು ಪಿಐಎಲ್ ವಜಾಗೊಳಿಸಿ ಆದೇಶ ಹೊರಡಿಸಿದೆ.