ಬೆಂಗಳೂರು: ನಿವೃತ್ತ ಅಧಿಕಾರಿಗೆ ಹನಿಟ್ರ್ಯಾಪ್ ಮಾಡಿ 82 ಲಕ್ಷ ರೂ ಸುಲಿಗೆ ಮಾಡಿದ್ದ ಅಕ್ಕ, ತಂಗಿ ಸೇರಿ ಮೂವರನ್ನು ಜಯನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿ ನಿವಾಸಿ ಅಣ್ಣಮ್ಮ(40), ಸ್ನೇಹಾ(25) ಮತ್ತು ಆಕೆಯ ಪ್ರತಿ ಲೋಕೇಶ್(30) ಬಂಧಿತ ಆರೋಪಿಗಳಾಗಿದ್ದಾರೆ. ಸ್ನೇಹಿತರ ಮೂಲಕ ನಿವೃತ್ತ ಅಧಿಕಾರಿಗೆ ಅಣ್ಣಮ್ಮ ಪರಿಚಯವಾಗಿತ್ತು. ಆಕೆಯ ಪುತ್ರನಿಗೆ ಕ್ಯಾನ್ಸರ್ ಇದ್ದ ಕಾರಣ ಮಾಹಿತಿ ತಿಳಿದ ಅಧಿಕಾರಿ 5000 ರೂ. ನೆರವು ನೀಡಿದ್ದರು.
ನಂತರ ಹೋಟೆಲ್ ಗೆ ಅಧಿಕಾರಿ ಕರೆಸಿಕೊಂಡಿದ್ದ ಅಣ್ಣಮ್ಮ ಸಲುಗೆಯಿಂದ ದೃಶ್ಯದ ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಿ ಹಣ ದೋಚಿದ್ದಾಳೆ. ಅದೇ ವಿಡಿಯೋವನ್ನು ಸಹೋದರಿ ಸ್ನೇಹಾಗೆ ಕಳುಹಿಸಿ ಆಕೆಯಿಂದಲೂ ಬ್ಲಾಕ್ ಮೇಲ್ ಮಾಡಿಸಿ ಹಣ ಸುಲಿಗೆ ಮಾಡಿದ್ದಾರೆ. ಹೀಗೆ 82 ಲಕ್ಷ ರೂ. ದೋಚಿದ್ದ ಅಕ್ಕ, ತಂಗಿ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.