ಚಿಕ್ಕಮಗಳೂರು: ಹನಿಟ್ರ್ಯಾಪ್ ನಡೆಸುತ್ತಿದ್ದ 6 ಮಹಿಳೆಯರು ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. ಚಿಕ್ಕಮಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಪುರುಷರನ್ನು ಸೆಳೆದು ಮಹಿಳೆಯರು ವಿಡಿಯೋ ಚಿತ್ರೀಕರಿಸುತ್ತಿದ್ದರು. ನಂತರ ಪುರುಷರು ಪೊಲೀಸರ ಸೋಗಿನಲ್ಲಿ ಭೇಟಿ ನೀಡಿ ನಾವು ಕೇಳಿದಷ್ಟು ಹಣ ಕೊಟ್ಟರೆ ದಾಖಲಿಸುವುದಿಲ್ಲ. ಕೊಡದಿದ್ದರೆ ಕೇಸ್ ದಾಖಲಿಸುವುದಾಗಿ ಹೇಳಿ ಹಣ ಪಡೆದು ಬಿಟ್ಟು ಕಳಿಸುವ ನಾಟಕವಾಡುತ್ತಿದ್ದರು.
ನಂತರ ಕರೆ ಮಾಡಿ ಹಣ ನೀಡುವಂತೆ ಒತ್ತಡ ಹೇರುತ್ತಿದ್ದರು. ಹಣ ಕೊಡದಿದ್ದರೆ ಜಾಲತಾಣಗಳಲ್ಲಿ ವಿಡಿಯೋ ಹರಿ ಬಿಡುವುದಾಗಿ ಬೆದರಿಕೆ ಹಾಕಿದ್ದರಲ್ಲದೇ, ಕುಟುಂಬಸ್ಥರಿಗೆ ವಿಡಿಯೋ ಕಳುಹಿಸುವುದಾಗಿ ಬೆದರಿಸಿದ್ದರು. ಚಿಕ್ಕಮಗಳೂರು, ಸಕಲೇಶಪುರದ ಮೂಲದ ಹನಿಟ್ರ್ಯಾಪ್ ಗ್ಯಾಂಗ್ ಬಂಧಿಸಲಾಗಿದೆ. ಬಂಧಿತರಿಂದ 1.97 ಲಕ್ಷ ರೂ. ನಗದು, 5 ಕಾರು, 10 ಕ್ಕೂ ಅಧಿಕ ಮೊಬೈಲ್ ವಶಕ್ಕೆ ಪಡೆಯಲಾಗಿದೆ.