alex Certify ವಿಶ್ವವಿದ್ಯಾಲಯ ಗೆಸ್ಟ್ ಹೌಸ್ ನಲ್ಲೇ ಹನಿಮೂನ್, ತನಿಖೆಗೆ ಆದೇಶಿಸಿದ ರಿಜಿಸ್ಟ್ರಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವವಿದ್ಯಾಲಯ ಗೆಸ್ಟ್ ಹೌಸ್ ನಲ್ಲೇ ಹನಿಮೂನ್, ತನಿಖೆಗೆ ಆದೇಶಿಸಿದ ರಿಜಿಸ್ಟ್ರಾರ್

ಆಂಧ್ರಪ್ರದೇಶದ ಕಾಕಿನಾಡ ಜವಾಹರಲಾಲ್ ನೆಹರು ಟೆಕ್ನಾಲಜಿಕಲ್ ಯೂನಿವರ್ಸಿಟಿ ಕ್ಯಾಂಪಸ್ ಅತಿಥಿಗೃಹದಲ್ಲಿ ಹನಿಮೂನ್ ಗೆ ವ್ಯವಸ್ಥೆ ಮಾಡಿದ ವಿಷಯ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಸಂಬಂಧ ತನಿಖೆಗೆ ಸಮಿತಿ ರಚಿಸಲಾಗಿದೆ.

ವಿಶ್ವವಿದ್ಯಾಲಯಕ್ಕೆ ಸೇರಿದ ಅತಿಥಿಗೃಹಗಳನ್ನು ವಿವಿಗೆ ಸಂಬಂಧಿತ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತದೆ. ಸೆಮಿನಾರ್, ಉಪನ್ಯಾಸ, ಕಾರ್ಯಾಗಾರ ಮೊದಲಾದ ಉದ್ದೇಶದಿಂದ ಬೇರೆ ಕಡೆಯಿಂದ ಬರುವ ವಿದ್ವಾಂಸರು, ತಜ್ಞರಿಗೆ ವಿವಿ ಅತಿಥಿಗೃಹ ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಇವರೊಂದಿಗೆ ಬೋಧಕರು, ಬೋಧಕೇತರ ಸಿಬ್ಬಂದಿ ಕೂಡ ಸದ್ಬಳಕೆ ಮಾಡಿಕೊಳ್ಳುತ್ತಾರೆ. ಆದರೆ, ಇದೇ ವಿವಿ ಅತಿಥಿಗೃಹದಲ್ಲಿ ಹನಿಮೂನ್ ಗೆ ವ್ಯವಸ್ಥೆ ಮಾಡಿಕೊಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಕೋಶದ ನಿರ್ದೇಶಕಿ ಸ್ವರ್ಣಕುಮಾರಿ ಆಗಸ್ಟ್ 18 ರಿಂದ ಎರಡು ದಿನಗಳ ಕಾಲ ಅತಿಥಿಗೃಹದ ವಸತಿ ಬಳಸಲು ಅನುಮತಿ ಪಡೆದುಕೊಂಡಿದ್ದರು. ಆದರೆ, ಅವರು ಕಾಯ್ದಿರಿಸಿದ್ದ ಕೋಣೆಯಲ್ಲಿಯೇ ದಂಪತಿ ಮಧುಚಂದ್ರ ಆಚರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದಕ್ಕಾಗಿ ದಂಪತಿಯ ಕುಟುಂಬದವರು, ಸ್ನೇಹಿತರು ಯಾವುದೇ ಅಧಿಕೃತ ಅನುಮತಿ ಪಡೆದುಕೊಂಡಿಲ್ಲ. ಘಟನೆಯ ಕುರಿತಾದ ಫೋಟೋ, ವಿಡಿಯೋ ವೈರಲ್ ಆಗಿದೆ. ಅದರಲ್ಲಿ, ಬೆಡ್ ಮೇಲೆ ಹೂವು ಹಾಕಿ ಮಧುಚಂದ್ರಕ್ಕೆ ವ್ಯವಸ್ಥೆ ಮಾಡಿರುವುದು ಕಂಡುಬಂದಿದೆ. ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಶ್ರೀನಿವಾಸರಾವ್ ಪರಿಶೀಲನೆ ನಡೆಸಿದ್ದು, ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಇದರೊಂದಿಗೆ ತನಿಖೆಗಾಗಿ ಸಮಿತಿ ಕೂಡ ರಚಿಸಲಾಗಿದೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ವಾಸಿರೆಡ್ಡಿ ಪದ್ಮಾ ಅವರು, ವಿಶ್ವವಿದ್ಯಾಲಯದ ಅತಿಥಿ ಗೃಹವನ್ನು ಇಂತಹ ಉದ್ದೇಶಕ್ಕೆ ಬಳಸುವ ಕ್ರಮ ಖಂಡನೀಯ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...