ಅನಾಮಧೇಯ ಮಹಿಳೆಯೊಬ್ಬಳು ಬೀಸಿದ `ಹನಿ ಟ್ರ್ಯಾಪ್’ ಗೆ ಬಲಿಯಾಗಿ ಭದ್ರತೆಗೆ ಸಂಬಂಧಿಸಿದ ಅತ್ಯಂತ ಸೂಕ್ಷ್ಮ ಮಾಹಿತಿಗಳನ್ನು ಆಕೆಗೆ ನೀಡುತ್ತಿದ್ದ ಆರೋಪದ ಮೇಲೆ ಭಾರತೀಯ ವಾಯುಪಡೆಯ ಸೈನಿಕನನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಸೈನಿಕ ಮಹಿಳೆಯ ಬಲೆಗೆ ಬಿದ್ದು ಮಾಹಿತಿಗಳನ್ನು ನೀಡುವ ಮೂಲಕ ಬೇಹುಗಾರಿಕೆ ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ.
ಕಾನ್ಪುರದ ದೇವೇಂದ್ರ ಶರ್ಮಾ, ಸುಬ್ರೊತೊ ಪಾರ್ಕ್ ನಲ್ಲಿರುವ ವಾಯುಸೇನೆಯ ದಾಖಲೆಗಳ ಕಚೇರಿಯಲ್ಲಿ ಆಡಳಿತ ವಿಭಾಗದಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈತನ ಚಲನವಲನಗಳನ್ನು ಗಮನಿಸಿದ್ದ ವಾಯುಸೇನೆ ಅಧಿಕಾರಿಗಳು ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ವಿಭಾಗದ ಕಂಪ್ಯೂಟರ್ ಗಳಿಂದ ಮಾಹಿತಿ ಪಡೆದು ಅದನ್ನು ಸೋರಿಕೆ ಮಾಡುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಶರ್ಮಾನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ʼತಾಜ್ ಮಹಲ್ʼ ಮುಚ್ಚಿರುವ ಕೋಣೆ ವಿಚಾರ: ಇತಿಹಾಸಕಾರರ ನಿರ್ಧಾರಕ್ಕೆ ಬಿಟ್ಟ ಹೈಕೋರ್ಟ್
ಪೊಲೀಸರ ಪ್ರಕಾರ, ದೇವೇಂದ್ರ ಶರ್ಮಾ ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನು ಶತ್ರು ರಾಷ್ಟ್ರದ ಏಜೆಂಟರಿಗೆ ನೀಡುತ್ತಿದ್ದ ಮತ್ತು ಅದಕ್ಕಾಗಿ ಹಣವನ್ನು ಪಡೆಯುತ್ತಿದ್ದನು.
ಶರ್ಮಾ ಫೇಸ್ ಬುಕ್ ನಲ್ಲಿ ಮಹಿಳೆಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದ. ಆಕೆ ಶರ್ಮಾಗೆ ಆಗಿಂದಾಗ್ಗೆ ಕರೆ ಮಾಡಿ ಐಎಎಫ್ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಳು. ಅಂದರೆ, ಐಎಎಫ್ ನ ರಾಡಾರ್ ಗಳು, ಹಿರಿಯ ಅಧಿಕಾರಿಗಳ ಪೋಸ್ಟಿಂಗ್ ಮತ್ತು ಅವರ ವಿವರಗಳನ್ನೆಲ್ಲಾ ಕಲೆ ಹಾಕುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.