ಕಲಬುರಗಿ: ಪೊಲೀಸ್ ಪೇದೆಯೊಬ್ಬರು ಹನಿಟ್ರ್ಯಾಪ್ ಬಲೆಯಲ್ಲಿ ಸಿಲುಕಿದ್ದು, ಮನನೊಂದ ಪತ್ನಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಕಲಬುರಗಿ ಸೆನ್ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಓರ್ವರನ್ನು ಪೂಜಾ ಡೊಂಗರಗಾಂವ್, ಅಮರಸಿಂಗ್ ಗ್ಯಾಂಗ್ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ, ಫೋಟೋ, ವೀಡಿಯೋ ಮೂಲಕ ಬ್ಲಾಕ್ ಮೇಲ್ ಮಾಡಿ ಪೇದೆ ಹಾಗೂ ಆತನ ಪತ್ನಿಯಿಂದ 8 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ.
8 ಲಕ್ಷ ಹಣ ನೀಡಿದರೂ ಸುಮ್ಮನಾಗದ ಪೂಜಾ ಹಾಗೂ ಗ್ಯಾಂಗ್ 15 ಲಕ್ಷಕ್ಕೆ ಬೆಡಿಕೆ ಇಟ್ಟಿದೆ. ಇದರಿಂದ ಮನನೊಂದ ಕಾನ್ಸ್ ಟೇಬಲ್ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗುಲಬರ್ಗಾ ವಿಶ್ವ ವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಆರೋಪಿಗಳಾದ ಪೂಜಾ ಹಾಗೂ ಅಮರಸಿಂಗ್ ಇಬ್ಬರೂ ಎಸ್ಕೇಪ್ ಆಗಿದ್ದಾರೆ.